×
Ad

ಆಳಂದ| ಕಬ್ಬಿಣದ ರಾಡ್ ನಿಂದ ಹಲ್ಲೆ; ಪ್ರಕರಣ ದಾಖಲು

Update: 2025-07-03 22:10 IST

ಕಲಬುರಗಿ: ಕಬ್ಬಿಣದ ರಾಡಿನಿಂದ ವ್ಯಕ್ತಿಯ ಮುಖದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿ ನಡೆದಿದೆ.

ಯಳಸಂಗಿ ಗ್ರಾಮದ ನಿವಾಸಿ ಮಕ್ತುಮ್ ಸಾಬ್ ನದಾಫ್(38) ಹಲ್ಲೆಗೆ ಒಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ. ಅದೇ ಗ್ರಾಮದ ತನವೀರ್ ನದಾಫ್ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಮಕ್ತುಮ್ ಎಂಬಾತರ ಮುಖದ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ, ಪರಿಣಾಮ ಮಕ್ತುಮ್ ಅವರ ಮುಖಕ್ಕೆ ಗಂಭೀರ ಗಾಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ತನವೀರ್ ಖಾಜಾಸಾಬ್ ನದಾಫ್, ತಂದೆ ಖಾಜಾಸಾಬ್ ನದಾಫ್ ಹಾಗೂ ತಾಯಿ ಬೇಗಂ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News