×
Ad

ಕಲಬುರಗಿಯ ನಾಲ್ಕು ಕಲಾವಿದರಿಗೆ ʼಬ್ರಹ್ಮೋತ್ಸವ ಪ್ರಶಸ್ತಿʼ ಪ್ರದಾನ

Update: 2025-01-20 22:31 IST

ಕಲಬುರಗಿ : ಆಂಧ್ರಪ್ರದೇಶದ ಅಮಲಾಪುರದ ಕೋನಸೀಮಾ ಚಿತ್ರಕಲಾ ಪರಿಷತ್ತು ಭಾನುವಾರ ಆಯೋಜಿಸಿದ್ದ 35ನೇ ವಾರ್ಷಿಕ ಅಂತರ್ ರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಕಲಬುರಗಿಯ ನಾಲ್ವರು ಕಲಾವಿದರಿಗೆ ʼಬ್ರಹ್ಮೋತ್ಸವಂ ಪ್ರಶಸ್ತಿʼ ನೀಡಿ ಗೌರವಿಸಲಾಯಿತು.

ಹಿರಿಯ ಕಲಾವಿದರಾದ ಸುಬ್ಬಯ್ಯ ನೀಲಾ ಮತ್ತು ರೆಹಮಾನ್ ಪಟೇಲ್ ಅವರನ್ನು 2025ನೇ ಸಾಲಿನ ಅತ್ಯುತ್ತಮ ಚಿತ್ರಗಳಿಗಾಗಿ ಗೌರವಿಸಲಾಯಿತು. ರಜನಿ ತಳವಾರ ಮತ್ತು ಶಹರಿಯಾರ್ ಉಸ್ತಾದ್ ಅವರ ಅತ್ಯುತ್ತಮ ಚಿತ್ರಗಳಿಗಾಗಿ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ನೀಲಾ ಮತ್ತು ಪಟೇಲ್ ಇಬ್ಬರೂ ಕಲಾವಿದರು ʼನಮ್ಮ ಕಲಾವಿದರು-ಬಾರ್ನ್ ಟು ಎಕ್ಸೆಲ್ʼ ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ಕಾಣಿಸಿಕೊಂಡಿದ್ದಾರೆ, ಇದು ಭಾರತದಾದ್ಯಂತ 200ಕ್ಕೂ ಹೆಚ್ಚು ಮಾಸ್ಟರ್ ಕಲಾವಿದರನ್ನು ಒಳಗೊಂಡಿದೆ.

ಕೋಣಸೀಮ ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿ ಕೊರಸಾಲ ಸೀತಾರಾಮ ಸ್ವಾಮಿ, ಅಧ್ಯಕ್ಷ ಮೆಟ್ಲ ರಮಣಬಾಬು, ಶಿಲ್ಪಿ ಆಚಾರ್ಯ ಡಿ ರಾಜ್ಕುಮಾರ್ ವುಡೆಯಾರ್ ಮತ್ತಿತರರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News