×
Ad

ಜಾತಿಗಣತಿ ನಿರ್ಧಾರ ಸ್ವಾಗತಾರ್ಹ: ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ

Update: 2025-05-04 21:14 IST

ಕಲಬುರಗಿ : ದೇಶದಲ್ಲಿ ಜನಗಣತಿ ಜೊತೆಗೆ ಜಾತಿಗಣತಿ ಮಾಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸ್ವಾತಂತ್ರ್ಯ ಪೂರ್ವದ 1931ರಲ್ಲಿ ಕೊನೆಯ ಬಾರಿಗೆ ಜಾತಿಗಣತಿ ನಡೆದಿತ್ತು. ಇದರ ಆಧಾರದ ಮೇಲೆಯೇ ಇದುವರೆಗೂ ನೀತಿ ನಿರೂಪಣೆ ನಿರ್ಧಾರವಾಗುತ್ತಿತ್ತು. ಈಗ ಮೋದಿ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದರು.

ಕರ್ನಾಟಕದಲ್ಲಿ 10 ವರ್ಷಗಳ ಹಿಂದಿನ ಜಾತಿ ಸಮೀಕ್ಷೆಯನ್ನು ಈಗ ಮಂಡಿಸಲಾಗುತ್ತಿದೆ. ಆದರೆ, ಇದರಲ್ಲಿ ಸಾಕಷ್ಟು ಲೋಪಗಳು ಇದ್ದು, ವರದಿ ಅವೈಜ್ಞಾನಿಕವಾಗಿದೆ. ಅಲ್ಲದೇ, ಯಾರು ಹಿಂದುಳಿದವರು ಮತ್ತು ಯಾಕೆ ಹಿಂದುಳಿದರು ಎಂಬ ಚರ್ಚೆ ನಡೆಯಬೇಕಿತ್ತು. ಆದರೆ, ಜಾತಿಗಳ ಸಂಖ್ಯೆ ಅಂಶಗಳ ಬಗ್ಗೆ ಮಾತ್ರ ಚರ್ಚೆ ಹುಟ್ಟುವ ಪ್ರಯತ್ನ ನಡೆದಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News