ಚಿತ್ತಾಪುರ| ಪ್ರವಾಹ ಪೀಡಿತ ಪ್ರದೇಶಕ್ಕೆ ಸಿಇಒ ಭಂವರ್ ಸಿಂಗ್ ಮೀನಾ ಭೇಟಿ, ಪರಿಶೀಲನೆ
Update: 2025-09-28 21:36 IST
ಕಲಬುರಗಿ: ಭೀಮಾ, ಕಾಗಿಣಾ ನದಿಯ ಪ್ರವಾಹಕ್ಕೆ ತುತ್ತಾಗಿರುವ ಚಿತ್ತಾಪುರ ತಾಲೂಕಿನ ಚಾಮನೂರ ಮತ್ತು ಕಡಬೂರ ಗ್ರಾಮಗಳ ನೇರೆ ಪೀಡಿತ ಪ್ರದೇಶಕ್ಕೆ ರವಿವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಭೇಟಿ ನೀಡಿದ ರಕ್ಷಣಾ ಕಾರ್ಯಚರಣೆ ಪರಿಶೀಲಿಸಿದರು.
ಭಾಗಶ: ಮುಳುಗಡೆಯಾಗಿರುವ ಕಡಬೂರ ಗ್ರಾಮದಲ್ಲಿ ಎನ್.ಡಿ.ಆರ್.ಎಫ್ ತಂಡದ ಜೊತೆಯಲ್ಲಿ ರಬ್ಬರ್ ಬೋಟಿನಲ್ಲಿ ತೆರಳಿದ ಅವರು ರಕ್ಷಣಾ ಕಾರ್ಯಚರಣೆ ವೀಕ್ಷಿಸಿದಲ್ಲದೆ ನೆರೆ ಪೀಡಿತಕ್ಕೆ ಒಳಗಾದ ಗ್ರಾಮಸ್ಥರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
ಇದಲ್ಲದೆ ಕುಂದನೂರ, ವಾಡಿ ಪಟ್ಟಣದಲ್ಲಿ ಸಂತ್ರಸ್ತರಿಗೆ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ಥರ ಅಹವಾಲು ಆಲಿಸಿದರು. ಪ್ರವಾಹ ಪೀಡಿತರಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸೌಕರ್ಯ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಚಿತ್ತಾಪುರ ತಾಲೂಕಾ ಪಂಚಾಯತ್ ಇ.ಒ. ಅಕ್ರಂ ಪಾಶಾ, ನೋಡಲ್ ಅಧಿಕಾರಿಗಳು ಇದ್ದರು.