ಕಲ್ಯಾಣ ಕರ್ನಾಟಕಕ್ಕೆ ಹೊಸ ಯೋಜನೆ ಘೋಷಣೆಗೆ ಕೇಂದ್ರಕ್ಕೆ ಒತ್ತಾಯ
ದುಂಡು ಮೇಜಿನ ಸಭೆಯಲ್ಲಿ ಹೋರಾಟ ಸಮಿತಿಯ ನಿರ್ಧಾರ
ಕಲಬುರಗಿ, ಜ.21: ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದ್ದು, ಮುಂದಿನ ಬಜೆಟ್‌ನಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಘೋಷಣೆ ಮಾಡಿದ ಯೋಜನೆಗಳ ಅನುಷ್ಠಾನ ಮತ್ತು ಹೊಸ ಯೋಜನೆಗಳ ಘೋಷಣೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ನಿರ್ಧಾರವನ್ನು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ದುಂಡು ಮೇಜಿನ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಇಲ್ಲಿನ ಶರಣ ಬಸವ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು.
ಕೇಂದ್ರ ಬಜೆಟ್ ನಲ್ಲಿ ಆಗಬೇಕಾದ ಅಭಿವೃದ್ಧಿ ವಿಷಯಗಳ ಕುರಿತಾಗಿ ಸಮಿತಿಯ ಮುಖಂಡರು ಮಂಡಿಸಿದರು.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಹಣ ಮಂಜೂರು
ಮಾಡುವುದು, ಕಲಬುರಗಿ ರೈಲೈ ವಿಭಾಗೀಯ ಕಚೇರಿ ಸ್ಥಾಪಿಸುವುದು, ಕೃಷ್ಣಾ ಯೋಜನೆ ಕೇಂದ್ರ ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲು, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮೊದಲಾದ ಅಭಿವೃದ್ದಿ ಗೆ ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲಕ್ಷ್ಮಣ ದಸ್ತಿ, ಪ್ರೊ .ಆರ್. ಕೆ ಹುಡುಗಿ, ಡಾ. ಕಿರಣ್ ದೇಶಮುಖ, ಪ್ರೊ ಬಸವರಾಜ ಕುಮ್ನೂರ, ಪ್ರೊ.ಬಸವರಾಜ ಗುಲಶೆಟ್ಟ, ರಾಜ್ಯ ನೀತಿ ಆಯೋಗದ ಸದಸ್ಯರು ಮತ್ತು ಗೋವಿಂದರಾವ ನೇತೃತ್ವದ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿಯ ಸದಸ್ಯರಾದ ಸಂಗೀತಾ ಕಟ್ಟಿ, ಕೈಲಾಸನಾಥ ದೀಕ್ಷಿತ್, ಬಿ.ಬಿ.ನಾಯಕ, ಡಾ.ಗಾಂಧೀಜಿ ಮೋಳಕೇರೆ, ಡಾ.ಸನಾಉಲ್ಲಾ, ಡಾ.ಮಾಜೀದ ದಾಗಿ, ಡಾ.ಸದಾನಂದ ಪೆರ್ಲಾ, ರೌಫ ಖಾದ್ರಿ, ಅಸ್ಲಂ ಚೌಂಗೆ, ಸುಭಾಷ್ ಪಾಂಚಾಳ, ಖಾಜಿ ರಿಜ್ವಾನ್ ಸಿದ್ಧಿಕಿ, ಎಮ್ ಬಿ ನಿಂಗಪ್ಪ, ಸಂಧ್ಯಾರಾಜ, ಮುತ್ತಣ್ಣ ನಡಗೇರಿ, ಮೋಹನ ಕಟ್ಟಿಮನಿ, ಡಾ.ಮಂಜೂರು ಡೆಕ್ಕನಿ, ಮಲ್ಲಪ್ಪ, ವಿನೋದ ಚವ್ಹಾಣ, ಶರಣಬಸಪ್ಪ.ಕೆ. ಶ್ರೀಕಾಂತ್ ದೇಸಾಯಿ ಮೊದಲಾದವರು ಉಪಸ್ಥಿತರಿದ್ದರು.