×
Ad

ಕಲಬುರಗಿ | ಪ್ರೊ.ಎ.ಎಚ್.ರಾಜಾಸಾಬ್ ಅವರಿಗೆ ಅಭಿನಂದನಾ ಸಮಾರಂಭ

Update: 2025-06-15 21:54 IST

ಕಲಬುರಗಿ: ನಗರದ ಶ್ರೀ ವಿದ್ಯಾ ಪದವಿ ಪೂರ್ವ, ಪದವಿ ವಿಜ್ಞಾನ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಪ್ರೊ.ಎ.ಎಚ್.ರಾಜಾಸಾಬ್ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು.  

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ.ಎ.ಹೆಚ್ ರಾಜಸಾಬ್, ವಿಜ್ಞಾನದ ಪ್ರಗತಿಯು ರಾಷ್ಟ್ರದ ಪ್ರಗತಿ. ಒಂದು ರಾಷ್ಟ್ರದ ಅಭಿವೃದ್ಧಿ ವಿಜ್ಞಾನ ಕ್ಷೇತ್ರವನ್ನು ಅವಲಂಬಿಸಿದೆ. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಸಾಕಷ್ಟು ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದರೂ ಸಹ ಅಲ್ಲಲ್ಲಿ ಮೌಢ್ಯ ಕಂದಾಚಾರ ಪ್ರಕರಣಗಳು ಇನ್ನು ಜೀವಂತವಾಗಿರುವುದು ದುರಾದೃಷ್ಟಕರ ಎಂದು ಹೇಳಿದರು. 

ಗಿರೀಶ್ ಕಡ್ಲೆವಾಡ ಮಾತನಾಡಿ, ಮಣ್ಣು ನೀರು ಗಾಳಿ ಕಲುಷಿತಕೊಂಡಿದೆ, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಲ್ಲರೂ ಸೇರಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಈ ವೇಳೆ ಡಾ. ನರೇಂದ್ರ ಬಡಶೇಶಿ, ಡಾ. ಕವಿರಾಜ್ ಪಾಟೀಲ್,  ಡಾ. ಪ್ರಭಾ ಎಸ್ಎನ್, ಡಾ.ಗತಪ್ನಡಗಿ, ಸಂಗಮೇಶ್ ಹಿರೇಮಠ್, ಡಾ.ಸರಸ್ವತಿ, ಡಾ. ಲತಾ ಕರೆಕಲ್, ಡಾ. ಜಗನ್ನಾಥ್ ಡೆಂಗಿ, ಅಸ್ರ ಯಾಸ್ಮಿನ್, ಮಹೇಶ್ ದೆವಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News