×
Ad

ಅಮಾನವೀಯವಾಗಿ ಕಾರ್ಮಿಕನ ಮೃತದೇಹ ಎಳೆದೊಯ್ದ ಘಟನೆ ಖಂಡಿಸಿದ ಕೆ. ನೀಲಾ; ಸಿಮೆಂಟ್ ಕಾರ್ಖಾನೆ ಮಾಲಕನ ಬಂಧನಕ್ಕೆ ಆಗ್ರಹ

Update: 2025-02-19 22:35 IST

ಕೆ ನೀಲಾ 

ಕಲಬುರಗಿ: ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಹತ್ತಿರದ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಿಹಾರ ಮೂಲದ ಚಂದನಸಿಂಗ್ (34) ಎಂಬ ಕಾರ್ಮಿಕನ ಮೃತದೇಹವನ್ನು ಕಾರ್ಮಿಕರ ಮೂಲಕ ರಸ್ತೆಯ ಮೇಲಿನಿಂದ ಎಳೆದೊಯ್ಯಲಾಗಿರುವ ಅಮಾನವೀಯ ಘಟನೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಖಂಡಿಸಿದ್ದಾರೆ.

ಯುವಕನ ಮೃತದೇಹವನ್ನು ಗೌರವಯುತವಾಗಿ ಸಾಗಿಸಬೇಕಾದ ವ್ಯವಸ್ಥೆ ಮಾಡಬೇಕಾಗಿರುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿದ್ದು, ತನ್ನ ಜವಾಬ್ದಾರಿ ನಿಭಾಯಿಸದ ಆಡಳಿತ ಮಂಡಳಿಯು ಇಂತಹ ಅಮಾನವೀಯತೆಗೆ ಕಾರಣವಾಗಿದೆ. ಈ ಅಮಾನವೀಯತೆಯು ಸಿಮೆಂಟ್ ಕಾರ್ಖಾನೆಯ ಮಾಲಕರ ಕಾರ್ಮಿಕರ ವಿರೋಧಿ ಕ್ರೌರ್ಯದ ಧೋರಣೆಯ ಅನಾವರಣಗೊಂಡಿದೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಟೀಕಿಸಿದ್ದಾರೆ.

ಕಾರ್ಮಿಕನ ಮೃತದೇಹವನ್ನು ಸಾಗಿಸಲು ವ್ಯವಸ್ಥೆ ಮಾಡಲಾರದ ಸಿಮೆಂಟ್ ಕಾರ್ಖಾನೆಯ ಮಾಲಕರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಮತ್ತು ಮೃತ ಕಾರ್ಮಿಕನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಧನ ಒದಗಿಸಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆಯು ಕಾರ್ಖಾನೆಯ ಮಾಲಕರ ಮೇಲೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News