ಅತ್ತ್ಯುತ್ತಮ ಸೇವೆಯೇ ಕೆಬಿಎನ್ ಆಸ್ಪತ್ರೆಯ ಗುರಿ : ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ
ಕಲಬುರಗಿ : ಕೆಬಿಎನ್ ಆಸ್ಪತ್ರೆಯು ಬಡವರ ಸಲುವಾಗಿ ನಿರ್ಮಾಣವಾಗಿದ್ದು, ಅವರಿಗೆ ಕೈಗಟುಕುವ ದರದಲ್ಲಿ ಚಿಕಿತ್ಸೆ ಒದಗಿಸಿ ಸಮಾಜ ಸೇವೆಯಲ್ಲಿ ನಿರತವಾಗಿದೆ. ಈಗ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿ ಅತ್ತ್ಯುತ್ತಮ ಸೇವೆಯ ಗುರಿಯನ್ನು ಹೊಂದಿದೆ ಎಂದು ಖಾಜಾ ಬಂದೇನವಾಜ್ ವಿಶ್ವ ವಿದ್ಯಾಲಯದ ಕುಲಾಧಿಪತಿ ಸಜ್ಜಾದೆ ನಶೀನ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರು ಹೇಳಿದರು.
ರವಿವಾರ ನಗರದ ಕೆಬಿಎನ್ ಟೀಚಿಂಗ್ ಮತ್ತು ಜನರಲ್ ಆಸ್ಪತ್ರೆಯ ದಂತ ವಿಭಾಗದ ನವ ಹೊರ ರೋಗಿಗಳ ಘಟಕವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಕೆಬಿಎನ್ ಆಸ್ಪತ್ರೆಯ ಸುಮಾರು ವರ್ಷಗಳಿಂದ ನಗರದಲ್ಲಿ ಮೆಡಿಕಲ್ ಹಬ್ ಅನ್ನು ಸೃಷ್ಟಿಸಿದೆ. ಅತಿ ಕಡಿಮೆ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಇತ್ತೀಚಿಗಷ್ಟೇ ಹೊಸ ಓಟಿ ನಿರ್ಮಾಣ ಕೂಡ ಮಾಡಿದ್ದಾಗಿದೆ. ಅಲ್ಲಿ ಅಪರೇಷನ್‌ಗಳು ನಡೆದಿವೆ. ಕೆಬಿಎನ್ ಹೊಸ ಮೈಲುಗಲ್ಲು ಸೃಷ್ಟಿಸಲಿ ಎಂದು ಹಾರೈಸುವೆ ಎಂದರು.
ಈ ಸಂದರ್ಭದಲ್ಲಿ ಡಾ.ಮುಸ್ತಫಾ ಅಲ್ ಹುಸೈನಿ, ಪ್ರೊ.ಅಲಿ ರಜಾ ಮೂಸ್ವಿ, ಡಾ.ಜಮಾ ಮೂಸ್ವಿ, ಡಾ.ಸಿದ್ಧಲಿಂಗ ಚೆಂಗಟಿ ವೈದ್ಯಕೀಯ ಅಧೀಕ್ಷಕ, ಡಾ.ರಾಧಿಕಾ, ರಿಜಿಸ್ಟ್ರಾರ್ ಮಿರ್ ವಿಲಾಯತ್ ಅಲಿ, ಐಕ್ಯೂಎಸಿ ನಿರ್ದೇಶಕ ಡಾ.ಮೊಹಮ್ಮದ್ ಅಬ್ದುಲ್ ಬಸೀರ್, ಹೈದರಾಬಾದ್‌ನ ಎಐಜಿ ಆಸ್ಪತ್ರೆಯ ದಂತವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಧು ವಾಸೆಪಲ್ಲಿ, ಕೆಬಿಎನ್ ದಂತ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಅಲಿ ಆರ್.ಪಟೇಲ್, ಡಾಅಸ್ಮಾ ತಬಸ್ಸಮ್, ಡಾ.ಆಯಿಷಾ ಫಾತಿಮಾ, ಡಾ.ವಿಕಾರ್ ಅಹ್ಮದ್ ಮತ್ತು ಡಾ.ಜುಹೀ ಮತ್ತು ಸಿಬ್ಬಂದಿ ಹಾಜರಿದ್ದರು.