×
Ad

ಕಲಬುರಗಿ ಸಾಹಿತ್ಯ ಸಮ್ಮೇಳನದ ನಿಮಿತ್ತ ನಾಳೆಯಿಂದ ಛಾಯಾಚಿತ್ರಗಳ ಪ್ರದರ್ಶನ

Update: 2025-02-18 19:53 IST

ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ 20 ರಿಂದ ಎರಡು ದಿನಗಳ ನಗರದ ಕನ್ನಡ ಭವನದಲ್ಲಿ ಶ್ರೀ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್.ಅಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಕಲಬುರಗಿ ಜಿಲ್ಲಾ 21 ನೇ ಕನ್ನಡ ಸಾಹಿತ್ಯ ಸಮ್ಮೇಳನದಂಗವಾಗಿ ಐತಿಹಾಸಿಕ ಸ್ಥಳಗಳುಳ್ಳ ಛಾಯಾಚಿತ್ರಗಳ ಪ್ರದರ್ಶನ ಜರುಗಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಬುಧವಾರ ( ಫೆ.19 ) ಬೆಳಗ್ಗೆ 11:15ಕ್ಕೆ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲ್ಲಿದ್ದು, ಜಿಲ್ಲೆಯ ಖ್ಯಾತ ಛಾಯಾಚಿತ್ರಕಾರರಿಂದ ಐತಿಹಾಸಿಕ ಸ್ಮಾರಕಗಳು ಹಾಗೂ ಕೆಲ ವಿಸ್ಮಯಕಾರಿ ಸಂಗತಿಗಳ ಬಗ್ಗೆ ಕಲಾ ಕುಂಚದಲ್ಲಿ ಅರಳಿವೆ. ಕಲೆ, ಸಾಹಿತ್ಯ, ಸಂಗೀತದಷ್ಟೇ ಛಾಯಾಚಿತ್ರಯೂ ಕೂಡ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಜಿಲ್ಲೆಯ ಕಲಾಸಕ್ತರಿಗೆ ಮುಕ್ತ ಅವಕಾಶ ಮಾಡಿಕೊಡಲಾಗಿದೆ.

ಪ್ರತಿಭೆಗಳ ಮೂಲಕ ಅನಾವರಣಗೊಳಿಸುವ ಛಾಯಾಚಿತ್ರಗಳು ಬಹು ವರ್ಣರಂಜಿತವಾಗಿ ಕೂಡಿರಲಿವೆ. ಇತಿಹಾಸ ಪರಂಪರೆಯ ಆಶಯಗಳು ಹಾಗೂ ಮೌಲ್ಯಗಳನ್ನು ಪ್ರದಿಪಾದಿಸಲಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಪಾಲಿಕೆ ಆಯುಕ್ತ ಶಿಂಧೆ ಅವಿನಾಶ ಸಂಜೀವನ್ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ಕುಡಾ ಅಧ್ಯಕ್ಷ ಮಜಹರ್ ಆಲಂ ಖಾನೆ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳುಂಡಗಿ, ಡಾ.ರೆಹಮಾನ್ ಪಟೇಲ್, ಬಸವರಾಜ ತೋಟದ್, ರಾಜು ಕೋಷ್ಠಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೂರು ದಿನಗಳ ಕಾಲ ಈ ಪ್ರದರ್ಶನ ಜರುಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News