ಕಲಬುರಗಿ| ಕುಡಿತದ ಚಟ ಬಿಡಿಸಲು ನೀಡಿದ ಔಷಧ ಸೇವಿಸಿ ನಾಲ್ವರು ಮೃತಪಟ್ಟ ಪ್ರಕರಣ : ನಾಟಿ ವೈದ್ಯ ಫಕೀರಪ್ಪ ಮುತ್ಯಾ ಬಂಧನ
Update: 2025-08-08 17:34 IST
ಕಲಬುರಗಿ: ಸೇಡಂನ ಇಮಡಾಪುರ ಗ್ರಾಮದಲ್ಲಿ ಕುಡಿತದ ಚಟ ಬಿಡಿಸಲು ನೀಡಿದ ನಾಟಿ ಔಷಧ ಸೇವಿಸಿ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಔಷಧಿ ನೀಡಿರುವ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಟಿ ವೈದ್ಯ ಸಾಯಪ್ಪ ಅಲಿಯಾಸ್ ಫಕೀರಪ್ಪ ಮುತ್ಯಾ(27) ಬಂಧಿತ ಆರೋಪಿ.
ಫಕೀರಪ್ಪ ಮುತ್ಯಾ ಕುಡಿತದ ಚಟ ಬಿಡಿಸಲು ನೀಡಿರುವ ನಾಟಿ ಔಷಧಿ ಸೇವಿಸಿ ಲಕ್ಷ್ಮಿ, ಗಣೇಶ್ ರಾಠೋಡ್, ನಾಗೇಶ್ ಹಾಗೂ ಮನೋಹರ್ ಎಂಬವರು ಮೃತಪಟ್ಟಿದ್ದರು. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಸೇಡಂ ಪೊಲೀಸರು ರಂಜೋಳ ಗ್ರಾಮದಲ್ಲಿ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.