ಕಲಬುರಗಿ | ಬುರ್ಖಾ ಹಾಕಿಕೊಂಡು ಕಳ್ಳತನ : ಮೂವರ ಬಂಧನ
Update: 2024-10-19 14:58 IST
ಕಲಬುರಗಿ : ಬುರ್ಖಾ ಹಾಕಿಕೊಂಡು ಮಹಿಳೆಯರ ಬ್ಯಾಗ್‌ನಿಂದ ಆಭರಣ ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಬ್ರಹ್ಮಪುರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಬಾಪುನಗರದ ಏಕತಾ ಕೈಲಾಸ ಉಪಾಧ್ಯ, ಸರಿತಾ ಕಾಶಿನಾಥ ಪಾಟೀಲ್, ಕರುಣಾನಿಧಿ ಸಿದ್ದರಾಜು ಜೀನಕೇರಿ ಎಂದು ಗುರುತಿಸಲಾಗಿದೆ.
ನಗರದ ಸೂಪರ್ ಮಾರ್ಕೆಟ್ ಸಹಿತ ನಾನಾ ಕಡೆ ಬಸ್ ಹತ್ತುವಾಗ ಮಹಿಳೆಯರ ಬ್ಯಾಗ್‌ನಿಂದ ಮೂವರು ಮಹಿಳೆಯರನ್ನೊಳಗೊಂಡ ಗುಂಪು ಬಂಗಾರದ ಆಭರಣವನ್ನು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.
ಅ.14ರಂದು ಸೇಡಂ ನಿವಾಸಿ ನಾಗಮ್ಮ ಸೂರ್ಯಕಾಂತ ಎಂಬವರು ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಬಂಗಾರದ ಆಭರಣ ಕಳ್ಳತನವಾಗಿರುವ ಕುರಿತು ದೂರು ದಾಖಲಿಸಿದ್ದರು.
ಆರೋಪಿಗಳನ್ನು ಬಂಧಿಸಿದ ಪೊಲೀಸರು, ಅವರ ಬಳಿಯಿಂದ 3.5 ಲಕ್ಷ ರೂ. ಮೌಲ್ಯದ 55 ಗ್ರಾಂ. ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.