ಕಲಬುರಗಿ | ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ
Update: 2025-01-20 19:29 IST
ಕಲಬುರಗಿ : ದೇವಸ್ಥಾನದ ಕಾಣಿಕೆಯ ಹುಂಡಿಯನ್ನೇ ಕಳ್ಳತನ ಮಾಡಿರುವ ಘಟನೆ ಕಾಳಗಿ ತಾಲ್ಲೂಕಿನ ಕಂದಗೋಳ ಗ್ರಾಮದಲ್ಲಿ ನಡೆದಿದೆ.
ಕಂದಗೋಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಇಟ್ಟಿದ್ದ ಹುಂಡಿ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ನಸುಕಿನ ಜಾವದಲ್ಲಿ ಇಬ್ಬರು ಮುಸುಕುಧಾರಿಗಳು ಕಾಣಿಕೆಯ ಹುಂಡಿಯನ್ನು ಕಳ್ಳತನ ಮಾಡಿರುವುದು ಅಲ್ಲಿನ ಸಿಸಿ ಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ಪ್ರತಿವರ್ಷ 1.5 ಲಕ್ಷ ರೂ. ಹಣ ಸಂದಾಯವಾಗುತ್ತಿದ್ದು, ಕಾರ ಹುಣ್ಣಿಮೆಯಂದೇ ಕಾಣಿಕೆಯ ಹಣವನ್ನು ಹೊರತೆಗೆಯಲಾಗುತ್ತದೆ ಎಂದು ಭಕ್ತರೊಬ್ಬರು ತಿಳಿಸಿದ್ದಾರೆ.
ಸ್ಥಳಕ್ಕೆ ಡಿಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಜಾಗದೇವ ಪಾಳಾ ಮತ್ತಿತರ ಸಿಬ್ಬಂದಿಯರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಈ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.