×
Ad

ಕಲಬುರಗಿ | ಜು.2 ರಂದು ಫ.ಗು.ಹಳಕಟ್ಟಿ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲು ಎಡಿಸಿ ರಾಯಪ್ಪ ಹುಣಸಗಿ ಸೂಚನೆ

Update: 2025-06-23 21:43 IST

ಕಲಬುರಗಿ: ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿಜೃಂಭಣೆಯಿಂದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಆಚರಿಸಲು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜು.2ರಂದು ಕನ್ನಡ ಭವನದಲ್ಲಿ ಮುಂಜಾನೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮಾತನಾಡಿ, ನಾಡಗೀತೆ ಸಂಗೀತ ಕಾರ್ಯಕ್ರಮ ಹಾಗೂ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗುವುದು ಎಂದರು.

ಈ ವೇಳೆಯಲ್ಲಿ ಜಯಂತಿ ಅಧ್ಯಕ್ಷ ರಾಮಲಿಂಗಪ್ಪ ಚನ್ನವೀರಪ್ಪ ಘಾಳೆ, ಸಮುದಾಯದ ಅಧ್ಯಕ್ಷರು ಚನ್ನಮಲ್ಲಪ್ಪ ನಿಂಬೇಣಿ, ಗೌರವ ಅಧ್ಯಕ್ಷ ಶಿವಪುತ್ರಪ್ಪ ಬಾವಿ, ಸಮಾಜದ ಮುಖಂಡರಾದ ವಿನೋದ ಕುಮಾರ, ರವಿಂದ್ರ ಶಾಬಾದಿ, ಸೂರ್ಯಕಾಂತ ಸೋನ್ನದ್, ಶಿವಲಿಂಗಪ್ಪ ಅಷ್ಟಗಿ, ಬಸವರಾಜ ಚೆನ್ನೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News