ಕಲಬುರಗಿ | ಹೋರಾಟಗಾರ ದಿ.ಡಾ.ವೈಜನಾಥ ಪಾಟೀಲರ 6 ನೇ ಪುಣ್ಯಸ್ಮರಣೆ
Update: 2025-11-02 21:53 IST
ಕಲಬುರಗಿ : ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಹೈದರಾಬಾದ್ ಕರ್ನಾಟಕದ 371 ಜೆ ಕಲಂ ರೂವಾರಿ, ಹೋರಾಟಗಾರ ದಿ.ಡಾ.ವೈಜನಾಥ ಪಾಟೀಲ ಅವರ 6ನೇ ಪುಣ್ಯಸ್ಮರಣೆ ಮಾಡಲಾಯಿತು.
ಅಹಿಂದ ಸಂಘಟನೆಯ ಅದ್ಯಕ್ಷ ಸೈಬಣ್ಣಾ ಜಮಾದಾರ ಮಾತನಾಡಿ, ಹೈದರಾಬಾದ್ ಕರ್ನಾಟಕಕ್ಕೆ ಸಾಮಾಜಿಕ ನ್ಯಾಯ ಕೋಡಲು ವೈಜನಾಥ್ ಪಾಟೀಲ್ ಅವರ ಕೊಡುಗೆ ಅಪಾರವಾಗಿದೆ. ಅದರಲ್ಲಿ ಯುವ ಜನರಿಗೆ, ಸರಕಾರಿ ನೌಕರರಿಗೆ ಪಾಟೀಲ್ ಸೇವೆ ಸ್ಮರಣೀಯ ಎಂದರು.
ವೈಜನಾಥ ಪಾಟೀಲ್ ರವರ ಜನ್ಮದಿನವನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಅವರ ಮೂರ್ತಿ ಸ್ಥಾಪಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಪಟ್ಟೆದಾರ, ಬಕ್ಕಪ್ಪ, ಪ್ರಭು, ಪ್ರಕಾಶ ಹೊಟ್ಕರ್, ಚನ್ನವಿರ, ಮಲ್ಲಯ್ಯ ಸ್ವಾಮಿ, ರಮಾಕಾಂತ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.