×
Ad

ಕಲಬುರಗಿ | ನೇಣು ಬಿಗಿದುಕೊಂಡು ಅಡತ್ ಮಾಲಕನ ಆತ್ಮಹತ್ಯೆ

Update: 2025-07-25 21:22 IST

ಕಲಬುರಗಿ: ಅಡತ್‌ನಲ್ಲಿ ಮಾಲಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಎಪಿಎಂಸಿ ಗಂಜ್‌ನಲ್ಲಿರುವ ನಡೆದಿದೆ.

ಈರಣ್ಣ ಹವಾ (34) ಎಂಬುವರು ಆತ್ಮಹತ್ಯೆ ಮಾಡಿಕೊಂಡ ಅಡತ್‌ ಮಾಲಕರೆಂದು ಗುರುತಿಸಲಾಗಿದೆ.

ನಗರದ ಸುಲ್ತಾನಪುರದ ನಿವಾಸಿಯಾಗಿದ್ದ ಈರಣ್ಣ ಅವರು ಎಪಿಎಂಸಿಯಲ್ಲಿ ಅಡತ್ ಅಂಗಡಿ ಇಟ್ಟು ರೈತರ ಬೆಳೆದ ಬೆಳಗಳನ್ನು ಖರೀದಿಸಿ ವ್ಯಾಪಾರ ವಹಿವಾಟು ಮಾಡುತ್ತಿದ್ದರು ಎನ್ನಲಾಗಿದೆ. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಹಿನ್ನಲೆ ಗುರುವಾರ ತಡರಾತ್ರಿ ಅಂಗಡಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News