×
Ad

ಕಲಬುರಗಿ | ಅಲ್ಲಮ ಪ್ರಭುಗಳು ಶರಣ ಚಳುವಳಿಯ ಆತ್ಮಬಲವಾಗಿದ್ದರು : ಡಾ.ವೀರಶೆಟ್ಟಿ ಗಾರಂಪಳ್ಳಿ

Update: 2025-12-29 19:05 IST

ಕಲಬುರಗಿ: ಅಲ್ಲಮ ಪ್ರಭುಗಳು ಶರಣ ಚಳುವಳಿಯ ಆತ್ಮಬಲವಾಗಿದ್ದರು ಎಂದು ಕಲಬುರಗಿ ವಿಭಾಗದ ಹಿರಿಯ ಉಪ ನಿರ್ದೇಶಕರಾದ ಡಾ.ವೀರಶೆಟ್ಟಿ ಬಿ. ಗಾರಂಪಳ್ಳಿ ಅಭಿಪ್ರಾಯಪಟ್ಟರು.

ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಅಣ್ಣಾರಾವ ಪಾಟೀಲ ಸರಡಗಿ ಸ್ಮರಣಾರ್ಥ ಜರುಗಿದ ಅರಿವಿನ ಮನೆ 881ನೆಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಲ್ಲಮ ಪ್ರಭುಗಳ ವಚನಗಳಲ್ಲಿ ಗೂಡಾರ್ಥವಿದೆ. ಅಲ್ಲಮನಿಗೆ ಚರಿತ್ರೆಯ ಹಂಗಿಲ್ಲ, ಒಂದೆಡೆ ನೆಲೆ ನಿಲ್ಲದ ವ್ಯಕ್ತಿ ಆತನಾಗಿದ್ದ. ಪ್ರಭುಲಿಂಗಲೀಲೆ ಓದುವಾಗ ಎಚ್ಚರವಿರಬೇಕೆಂದು ಶಿಶುನಾಳ ಶರೀಫರು ಹೇಳುತ್ತಾರೆ. ಭಾರತವು ದರ್ಶನಗಳ ನೆಲೆಬೀಡಾಗಿದೆ. ಈ ದರ್ಶನಗಳಲ್ಲಿಯೇ ಅಲ್ಲಮಪ್ರಭುವಿನ ದರ್ಶನ ವಿಶಿಷ್ಟವಾಗಿದೆ. ಅಲ್ಲಮನ ಬೆಡಗು ಬೆರಗುಗೊಳಿಸುವಂತದ್ದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸವತಿ ಖೂಬಾ , ಉಪಾಧ್ಯಕ್ಷರಾದ ಡಾ.ಜಯಶ್ರೀ ದಂಡೆ, ಕಾರ್ಯದರ್ಶಿ ಡಾ.ಆನಂದ ಸಿದ್ಧಾಮಣಿ , ಡಾ.ಕೆ.ಎಸ್.ವಾಲಿ, ಶರಣಗೌಡ ಪಾಟೀಲ್ ಪಾಳ, ಬಂಡಪ್ಪ ಕೇಸುರ್, ದತ್ತಿ ದಾಸೋಹಿಗಳಾದ ನಾಗೇಂದ್ರಪ್ಪ ಅಣ್ಣಾರಾವ ಪಾಟೀಲ , ಉದ್ದಂಡಯ್ಯ ಮತ್ತಿತ್ತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News