×
Ad

ಕಲಬುರಗಿ: ಕರ್ತವ್ಯ ಲೋಪ ಆರೋಪ; ಶಿಕ್ಷಕ ಅಮಾನತು

Update: 2023-11-24 23:49 IST

ಕಲಬುರಗಿ: ಮೇಲಧಿಕಾರಿಗಳ ಗಮನಕ್ಕೆ ತರದೆ ರಜೆಗೆ ಹೋಗಿ ಕರ್ತವ್ಯ ಹುದ್ದೆಗೆ ಕರ್ತವ್ಯ ಲೋಪ ವೇಸಗಿದ್ದ ಹಿನ್ನೆಲೆ ಸರಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕನ್ನು ಅಮಾನತು ಗೊಳಿಸಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಶಾದಿಪೂರ ಸರಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾಗಿದ್ದ ಸಾಬ್ಬಣ್ಣ ಅಮಾನತು ಗೊಂಡ ಶಿಕ್ಷಕ. ಮೇಲಾಧಿಕಾರಿಗಳ ಗಮನಕ್ಕೆ ತರದೆ ರಜೆ ಮೇಲೆ ಹೋಗಿರುವುದು ಹಾಗೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಮರ್ಪಕವಾಗಿ ವಿತರಿಸದೆ ಮತ್ತು ಆಹಾರ ಸಾಮಗ್ರಿಗಳ ಖರ್ಚು,ಹಣಕಾಸಿನ ಖರ್ಚು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಕರ್ತವ್ಯಲೋಪವೆಂದು ಪರಿಗಣಿಸಿ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸಕ್ರೆಪ್ಪಗೌಡ ಜಿ ಬಿರಾದಾರ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News