ಕಲಬುರಗಿ | ಜ.28 ರಂದು ಎಂಎಸ್‌ಎಂಇ ಉದ್ದಿಮೆದಾರರಿಗೆ ಅರಿವು ಕಾರ್ಯಕ್ರಮ
Update: 2026-01-27 22:32 IST
ಕಲಬುರಗಿ: ಕಲಬುರಗಿ ಜಿಲ್ಲಾ ಕೈಗಾರಿಕೆ ಕೇಂದ್ರದಿಂದ ಜಿಲ್ಲೆಯ ಎಂ.ಎಸ್.ಎಂ.ಇ. ಉದ್ದಿಮೆದಾರರಿಗೆ ರ‍್ಯಾಂಪ್ ಯೋಜನೆಯಡಿ ಪರಿಸರ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತು ಜ.28 ರಂದು ನಗರದ ಎಂ.ಎಸ್.ಕೆ.ಮಿಲ್ ರಸ್ತೆಯ ಕೈಗಾರಿಕೆ ವಸಾಹತು ಪ್ರದೇಶದಲ್ಲಿರುವ ಎಂ.ಎಸ್.ಎಂ.ಇ ಡಿ.ಎಫ್.ಓ ಕಚೇರಿಯ ಸಭಾಂಗಣದಲ್ಲಿ ಬೆಳಿಗ್ಗೆ 10.30 ರಿಂದ ಹಮ್ಮಿಕೊಳ್ಳಲಾಗಿದೆ.
ಎಂ.ಎಸ್.ಎಂ.ಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವ ನಿಟ್ಟಿನಲ್ಲಿ ಈ ಒಂದು ದಿನದ ಅರಿವು ಕಾರ್ಯಕ್ರಮಕ್ಕೆ ಜಿಲ್ಲೆಯ ಆಸಕ್ತ ಎಂ.ಎಸ್.ಎಂ.ಇ ಉದ್ದಿಮೆದಾರರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್ ಮನವಿ ಮಾಡಿದ್ದಾರೆ.