ಶಹಾಬಾದ್ | ಗಣರಾಜ್ಯ ದಿನವನ್ನು ಧಾರ್ಮಿಕ ಹಬ್ಬಗಳಂತೆ ಮನೆಮನೆಗಳಲ್ಲಿ ಆಚರಿಸಬೇಕು: ನಿಂಗಣ್ಣ ಹುಳಗೋಳಕರ್
ಶಹಾಬಾದ್ : ಗಣರಾಜ್ಯ ದಿನವನ್ನು ನಾವೆಲ್ಲರೂ ಧಾರ್ಮಿಕ ಹಬ್ಬಗಳಂತೆ ಮನೆಮನೆಗಳಲ್ಲಿ ಮನ ಮನಗಳಲ್ಲಿ ಆಚರಿಸುವಂತಾಗಬೇಕು ಎಂದು ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು.
ಅವರು ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇಂದಿನ ಬಹುತೇಕ ಜನರು ಗಣರಾಜ್ಯ ದಿನವನ್ನು ಕೇವಲ ರಜೆ ಎಂಬ ಮಟ್ಟಿಗೆ ಮಾತ್ರ ಅರ್ಥಮಾಡಿಕೊಂಡಿರುವುದು ದುರದೃಷ್ಟಕರ. ದೇಶದ ಅಭಿವೃದ್ಧಿ, ರಾಜಕೀಯ ನೀತಿ, ದೇಶರಕ್ಷಣೆ, ನ್ಯಾಯಾಂಗ ಹಾಗೂ ಕಾರ್ಯಾಂಗಗಳ ಬಗ್ಗೆ ಜನರಲ್ಲಿ ಗೌರವ ಮೂಡುವಂತಹ ವಾತಾವರಣ ನಿರ್ಮಾಣವಾಗಬೇಕು. ಪ್ರತಿಯೊಬ್ಬ ಪ್ರಜೆಯಲ್ಲಿಯೂ ತಾನು ಭಾರತೀಯ ಎಂಬ ಪ್ರಜ್ಞೆ ಜಾಗೃತವಾಗಿರಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಬಸವರಾಜ ಬಿರಾದಾರ, ಸಮಾಜದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂಪೂರ್ಣ ಸ್ವಾತಂತ್ರ್ಯದ ಕನಸು ಕಂಡು ಸಂವಿಧಾನ ರಚಿಸಿದ ಮಹಾನ್ ನಾಯಕರು ಮತ್ತು ಮಹಾತ್ಮರ ಆಶಯಗಳು ನಿಜವಾಗಿಯೂ ಸಾಕಾರಗೊಳ್ಳಬೇಕಾದರೆ, ನಾವು ದಾರಿ ತಪ್ಪದೇ ಸರಿದಾರಿಯಲ್ಲಿ ಸಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ದಿನೇಶ ಗೌಳಿ, ದೇವದಾಸ ಜಾಧವ, ಶಶಿಕಲಾ ಸಜ್ಜನ, ನೀಲಗಂಗಮ್ಮ ಗಂಟ್ಲಿ, ನಂದಾ ಗುಡೂರ, ಪದ್ಮಾ ಕಟಗೆ, ವಿಜಯಲಕ್ಷ್ಮಿ ನಂದಿ, ರೇಖಾ ಅಡಕೆ, ಬಸಮ್ಮ ನಂದಿ, ಗೀತಾ ಪವಾರ, ಶಿವಕುಮಾರ ಇಂಗಿನಶೆಟ್ಟಿ, ಭಾನುದಾಸ ತುರೆ, ಯಲ್ಲಪ್ಪ ದಂಡಗುಲಕರ, ಬಸವರಾಜ ಸಾತ್ಯಾಳ, ಉಮೇಶ ನಿಂಬಾಳಕರ, ಸಂದೀಪ ಹದನೂರ, ಭೀಮಯ್ಯ ಗುತ್ತೆದಾರ, ಶ್ರೀಧರ ಜೋಶಿ, ಸಂಜಯ ಕೊರೆ, ಶರಣು ಕರಣಗಿ, ಶ್ರೀನಿವಾಸ ದೇವಕರ, ದೊಡ್ಡಪ್ಪ ಹೊಸಮನಿ, ರಹೀಂ ಸಾಹೇಬ, ಬಾಬಾ, ಅವಿನಾಶ್ ಸಾಳುಂಕೆ, ಗೊವಿಂದ ದೊತ್ರೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.