ಕಲಬುರಗಿ | ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ದೇಶ ಸೇವೆಗೆ ಮುಂದಾಗಿ : ನಿಸಾರ್ ವಜೀರ್ ಕರೆ
Update: 2026-01-27 19:54 IST
ಕಲಬುರಗಿ: ಮಕ್ಕಳು ಸಮಾಜ ಮತ್ತು ದೇಶದ ಭವಿಷ್ಯ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಮಕ್ಕಳು ಐಎಎಸ್, ಐಪಿಎಸ್ ಪರೀಕ್ಷೆ ಪಾಸಾಗುವ ಗುರಿ ಇಟ್ಟುಕೊಳ್ಳಬೇಕೆಂದು ಅಲ್ ಹಸನೈನ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ಹಾಗೂ ನಿವೃತ್ತ ತಹಶೀಲ್ದಾರರಾದ ನಿಸಾರ್ ಅಹ್ಮದ್ ವಜೀರ್ ಅಭಿಪ್ರಾಯಪಟ್ಟರು.
ಸೋಮವಾರ ಅಂಬಿಕಾ ನಗರದಲ್ಲಿರುವ ಅಲ್ ಹಸನೈನ್ ಪಬ್ಲಿಕ್ ಸ್ಕೂಲ್ ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಕ್ಕಳು ಅಧುನಿಕ ಭಾರತದ ಭವಿಷ್ಯ. ವೈಚಾರಿಕವಾಗಿ ಆಲೋಚನೆಗಳು, ಪ್ರಶ್ನಿಸುವ ಮನೋಭಾವ ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಮುಖ್ಯ ಗುರುಗಳಾದ ಅಬ್ದುಲ್ ಮಜೀದ್, ಎಸ್.ಎಂ.ಜಿ. ಮುಹಿಯುದ್ದೀನ್, ಹಾಫಿಜ್ ಮುಹಮ್ಮದ್ ಜುಬೇರ್ ಅಹ್ಮದ್ ರಶಾದಿ ಸೇರಿದಂತೆ ಸಿಬ್ಬಂದಿಗಳು ಇದ್ದರು.