×
Ad

ಕಲಬುರಗಿ: ಬೈಕ್- ಬಸ್ ಢಿಕ್ಕಿ; ಮೂವರು ಮೃತ್ಯು

Update: 2024-05-27 10:54 IST

ಚಂದು | ಸಮೀರ್

ಕಲಬುರಗಿ:  ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಒಂದೇ ಗ್ರಾಮದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಮೃತ ಯುವಕರನ್ನು ಕಿಣ್ಣಿ ಸಡಕ್ ಗ್ರಾಮದ ಸಮೀರ್ ಅಹ್ಮದ್, ಚಂದು ಹಾಗೂ ಕೌಶಿಕ್ ಎಂದು ಗುರುತಿಸಲಾಗಿದೆ. ಕಿಣ್ಣಿ ಸಡಕ್ ಗ್ರಾಮದಿಂದ ಕಮಲಾಪುರಕ್ಕೆ ಆಧಾರ್ ಕಾರ್ಡ್ ಮಾಡಿಸಲು ತೆರಳುವ ವೇಳೆ ‌ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಕಮಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಸಿದ್ದು,  ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News