ಕಲಬುರಗಿ | ಕರಾಟೆ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್, ಕಲರ್ ಬೆಲ್ಟ್ ವಿತರಣೆ
Update: 2025-08-26 21:23 IST
ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಕಲ್ರಿ- ಎನ್ ರಿಯೂ ಅಕಾಡೆಮಿ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯಕುಮಾರ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಬ್ಲಾಕ್ ಬೆಲ್ಟ್ ಮತ್ತು ಕಲರ್ ಬೆಲ್ಟ್ ಎಕ್ಸಾಮ್ ಏರ್ಪಡಿಸಲಾಯಿತು.
ಬೆಂಗಳೂರಿನಿಂದ ಆಗಮಿಸಿದ ರೆಡ್ ಬೆಲ್ಟ್ ಗ್ರಾಂಡ್ ಮಾಸ್ಟರ್ ಶ್ರೀನಿವಾಸ್ ಅವರು, ವಿದ್ಯಾರ್ಥಿಗಳ ಪರೀಕ್ಷೆಯನ್ನು ವೀಕ್ಷಿಸಿ ಓರ್ವ ವಿದ್ಯಾರ್ಥಿಗೆ ಬ್ಲಾಕ್ ಬೆಲ್ಟ್ ಹಾಗೂ ಅನೇಕ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಮುಖ್ಯ ಕೋಚ್ ರಾಜವರ್ಧನ್ ಜಿ.ಚೌಹಾಣ್, ಶ್ರೀಕಾಂತ್ ಪೀಸಾಳ, ಪ್ರತಾಪ್ ಸಿಂಗ್ ಪವರ್, ಪ್ರೇಮ್ ರಾಥೋಡ್, ಸಾವಿತ್ರಿ, ಶ್ರೀನಿವಾಸ ಜಾಧವ್ ಸೇರಿದಂತೆ ಅನೇಕ ಕರಾಟೆ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.