ಕಲಬುರಗಿ | ಸಂವಿಧಾನವು ಸಮಸ್ತ ಭಾರತೀಯರ ಸಮಾನ ಸಂಪತ್ತು: ಪ್ರೊ.ವೆಲೇರಿಯನ್
ಕಲಬುರಗಿ : ಸಂವಿಧಾನವು ಸಮಸ್ತ ಭಾರತೀಯರ ಸಮಾನ ಸಂಪತ್ತು ಎಂದು ದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ವೆಲೇರಿಯನ್ ರೋಡ್ರಿಗಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ನಡೆದ ಭಾರತೀಯ ಸಂವಿಧಾನವು 75 ವರ್ಷಗಳು ಪೂರೆಸಿದ ಹಿನ್ನೆಲೆಯಲ್ಲಿ ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಒಂದು ಸಾಮಾನ್ಯ ಸಂಪನ್ಮೂಲವಾಗಿ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕು ಹಾಗೂ ಸ್ವಾತಂತ್ರ್ಯಗಳು ಅವಕಾಶ ಮತ್ತು ಅಧಿಕಾರಿಗಳಲ್ಲಿ ಗುರುತಿಸುವಿಕೆ ಇದೆ ಎಂದರು. ಸಂವಿಧಾನವು ನಾಗರಿಕರನ್ನು ಸರಿಸುಮಾರು ಎಂದು ಮಾತ್ರವಲ್ಲ ಅವರ ವೈಶಿಷ್ಟ್ಯ ಅಸ್ಮಿತೆ ಜನಸಮುದಾಯಗಳನ್ನು ಕೂಡ ಗುರುತಿಸುತ್ತದೆ ಮತ್ತು ಅವುಗಳ ಹಕ್ಕುಗಳು ಎತ್ತಿಹಿಡಿಯುತ್ತದೆ ಎಂದು ಹೇಳಿದರು.
ಮೀಸಲಾತಿ, ಅಲ್ಪಸಂಖ್ಯಾತರ ಹಕ್ಕುಗಳು, ಲಿಂಗತ್ವ ಸಂವೇದನೆ ಭಾಷಾವಾರು ಪ್ರದೇಶಗಳು, ಸಾಂಸ್ಕೃತಿಕ ಹಕ್ಕುಗಳು ಇವೆಲ್ಲವುಗಳು ಸಂವಿಧಾನವು ಪರಿಣಾಮಗಳಾಗಿವೆ ಎಂದ ಅಭಿಪ್ರಾಯಪಟ್ಟರು.
ಪ್ರಭುತ್ವ ಅಂಗಾಂಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇವುಗಳ ನಡುವೆ ವಿಭಜನೆ ಹಾಗೂ ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ವಿಭಜನೆ, ಸಂವಿಧಾನ ಸಭೆಯ ಚರ್ಚೆಯಲ್ಲಿ ಅಂಬೇಡ್ಕರ್ ಅವರು ಭಾರತವು ಒಂದು ವಿಶಿಷ್ಟವಾದ ಸಯುಕ್ತ ರಾಷ್ಟ್ರ ಹಾಗೂ ಅಮೆರಿಕ ಸ್ವಾಯತಿತ ಸಂಸ್ಥಾನ ಮಾದರಿಯನ್ನು ಎಲ್ಲಾ ಕಡೆ ಅನುಕರಣೆಯವಲ್ಲ ಎಂದು ಪ್ರತಿಪಾದಿಸಿದರು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಮಾತನಾಡಿ, ಭಾರತೀಯ ಸಂವಿಧಾನವು ನಿತ್ಯ ನಿರಂತರ ಮತ್ತು ಈ ದೇಶದ ಮೂಲ ಕಾನೂನು ಸಂವಿಧಾನವಾಗಿದೆ. ಸಂವಿಧಾನದಿಂದ ಮಾತ್ರ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಪ್ರೊ.ಚಂದ್ರಕಾಂತ ಯಾತನೂರ, ಪ್ರಸ್ತುತ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಸಂವಿಧಾನದ ಎರಡು ಪ್ರಮುಖ ಬೆಳವಣಿಗೆಗಳು ನಡೆದಿದೆ. ಒಂದು ವಿಮರ್ಶೆ ಮತ್ತು ಸುಧಾರಣೆ. ಸಂವಿಧಾನದ ಮೂಲವನ್ನು ಬದಲಾಯಿಸುವ ಹುನ್ನಾರ ನಡೆದಿದೆ. ಸಂವಿಧಾನದ ಪ್ರಸ್ತಾವನೆ ಮೂಲ ಆಶಯಗಳಿಗೆ ಧಕ್ಕೆ ಬರುತ್ತಿದೆ ಎಂದರು.
ಪ್ರೊ.ಗೋ.ರು ಶ್ರೀರಾಮುಲು ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಾಗರಾನ್ ಲೇಕಸಿಟಿ ವಿಶ್ವವಿದ್ಯಾಲಯದ ಮಧ್ಯಪ್ರದೇಶದ ವಿಶ್ರಾಂತ ಕುಲಪತಿ ಪ್ರೊ.ಸಂದೀಪ್ ಶಾಸ್ತ್ರಿ ಆಂಧ್ರ ಪ್ರದೇಶ ಕೇಂದ್ರೀಯ ವಿಶ್ವ ವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ, ಪ್ರೊ.ರಾಮರೆಡ್ಡಿ, ಸಿಂಡಿಕೇಟ್ ಸದಸ್ಯರಾದ ರಾಘವೇಂದ್ರ ಎಮ್.ಭೈರಪ್ಪ, ಡಾ.ಎನ್.ಕೆ.ಕಣ್ಣೂರ್ ಎಲ್ಲಾ ನಿಕಾಯದ ಡೀನರು ಮತ್ತು ವಿಭಾಗ ಮುಖ್ಯಸ್ಥರು ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರು ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.