×
Ad

ಕಲಬುರಗಿ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Update: 2025-05-18 11:52 IST

ಕಲಬುರಗಿ: ನಗರದ ಬಸವೇಶ್ವರ ಕಾಲೋನಿಯ ಕೆಇಬಿ ಗಾರ್ಡನ್ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಶವ ಪತ್ತೆಯಾಗಿರುವ ಘಟನೆ ರವಿವಾರ ಬೆಳಗ್ಗೆ ವರದಿಯಾಗಿದೆ.

ಅಂದಾಜು 45 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದ್ದು,  ಚರಂಡಿಯಲ್ಲಿ ಕಾಣಿಸಿದ ಮೃತದೇಹವನ್ನು ನೋಡಿದ ಬಸವೇಶ್ವರ ಕಾಲೋನಿಯ ನಿವಾಸಿಗಳು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಎಂ.ಬಿ.ನಗರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಎಂ.ಬಿ.ನಗರ ಪಿಎಸ್ಐ, ಪತ್ತೆಯಾದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ವ್ಯಕ್ತಿಯ ಪರಿಚಯಸ್ಥರು ಅಥವಾ ಕುಟುಂಬಸ್ಥರು ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News