ಕಲಬುರಗಿ | ತೊಗರಿ ಬೆಳೆ ನಷ್ಟಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಗೆ ರೈತ ಮುಖಂಡ ಯು.ಬಸವರಾಜ ಆಗ್ರಹ
ಕಲಬುರಗಿ: ನಗರದ ಕನ್ನಡ ಭವನದಲ್ಲಿ ಜಿಲ್ಲೆಯ ತೊಗರಿ ಬೆಳೆ ನಷ್ಟ ಅತಿವೃಷ್ಟಿ ಘೋಷಿಸಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಲು ದುಂಡು ಮೇಜಿನ ಸಭೆಯಲ್ಲಿ ರೈತ ಮುಖಂಡ ಯು.ಬಸವರಾಜ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ. ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಕಲಬುರಗಿ ಜಿಲ್ಲೆಯ ವಾಣಿಜ್ಯ ಬೆಳೆ ತೊಗರಿ ನಾಡಿನಲ್ಲಿ ಮುಂಗಾರು ಬಿತ್ತನೆ ಮಾಡಿದ ರೈತರ ರೊಕ್ಕದ ಮಾಲು ಬೆಳೆಗಳು ತೊಗರಿ 5,95,150 ಹೆಕ್ಟೇರ್, ಹೆಸರು 50,121 ಹೆಕ್ಟೇರ್, ಉದ್ದು 30,890, ಹೆಕ್ಟೇರ್ ಸೋಯಾ ಬಿನ್ 23,440, ಹೆಕ್ಟೇರ್ ಹತ್ತಿ 98,550 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ ಎಂದು ವಿವರಿಸಿದರು.
ಅತಿವೃಷ್ಟಿ ಮಳೆಯಿಂದ ಹಾನಿಯೊಳಗಾದ ಬೆಳೆ ಸಮೀಕ್ಷೆ ನಡೆಸುತ್ತಿಲ್ಲ, ಕೇಂದ್ರ ಸರ್ಕಾರದ ತಂಡ ತೊಗರಿ ನಾಡಿಗೆ ಬರಲು ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶರಣಸಬ್ಬಪ್ಪ ಮಮಶೆಟ್ಟಿ, ಅಲ್ತಾಫ ಇನಾಮಂದಾರ, ಸುಭಾಷ್ ಜೇವರ್ಗಿ, ದಿಲೀಪ್ ನಾಗೂರೆ, ಸಿದ್ದರಾಮ ಧಣ್ಣೂರು, ಸಿದ್ದಪ್ಪ ಕಲಸೆಟ್ಟಿ, ಪರಮೇಶ್ವರ ಕಾಂತಾ, ಭಿಮಶೆಟ್ಟಿ ಯಂಪಳ್ಳಿ, ದೆವು ಬಿರದ್ದಾರ, ನಾಗಯ್ಯಾ ಸ್ವಾಮಿ, ರಾಮಣ್ಣಾ ಅವುರಾದಿ, ರೇವಣಸಿದ್ದಪ್ಪಾ ಪಾಟೀಲ್ ಆಲಗೂಡ, ದೆವಿಂದ್ರಪ್ಪಾ ಪಾಟೀಲ್, ಮೌನೆಶ ನಾಲವಾರ, ಚಂದಪ್ಪಾ ಪೂಜಾರಿ ಸೇರಿದಂತೆ ಇತರರು ಇದ್ದರು.