×
Ad

ಕಲಬುರಗಿ| ಜಿಲ್ಲಾಡಳಿತದಿಂದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ

Update: 2026-01-14 20:03 IST

ಕಲಬುರಗಿ: ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಯಿತು.

ಶಿವಯೋಗಿ ಸಿದ್ಧರಾಮೇಶ್ವರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಸಿದ್ಧರಾಮೇಶ್ವರ ಜಯಂತಿಯನ್ನು ನಾವು ಇಂದು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಅವರ ಜೀವನವು ನಮಗೆ ಪ್ರೇರಣೆಯಾಗಿದೆ, ಅವರು ಸಮಾಜಕ್ಕೆ ಸೇವೆ ಮತ್ತು ಶ್ರದ್ಧೆಯ ತತ್ವಗಳನ್ನು ಅರ್ಥ ಮಾಡಿಸಿದರು ಎಂದು ಹೇಳಿದರು.

ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮ್‌ಪ್ರಭು ಪಾಟೀಲ್‌ ಮಾತನಾಡಿ, ಸಿದ್ದರಾಮೇಶ್ವರ ಅವರ ತಂದೆ ತಾಯಿಗಳು ಕಾಯಕ ಜೀವಿಗಳು ಭಗವಂತನ ಪ್ರೇರಣೆ ಪಡೆದವರು. ಮಲ್ಲಿಕಾರ್ಜುನ ಧ್ಯಾನ ಮಾಡಿದವರು. ಪರಮಾತ್ಮ ರೂಪವನ್ನು ಪಡೆದ ರೇವಣಸಿದ್ದೇಶ್ವರರ ಆಶೀರ್ವಾದದಿಂದಾಗಿ ಸಿದ್ಧರಾಮೇಶ್ವರರು ಜನಿಸಿದರು ಎಂದರು.

ಕಾಯಕವೇ ಕೈಲಾಸ ಎಂದುಕೊಂಡ ಸಿದ್ದರಾಮೇಶ್ವರರು ಮಾದರಿಯಾಗಿ, ಸಾಹಿತಿಯಾಗಿ, ವಚನಕಾರರಾಗಿ, ಸಮಾಜ ಸುಧಾರಕರಾಗಿ ಅತ್ಯಂತ ಹೆಸರುವಾಸಿಯಾಗಿ ಸೊಲ್ಲಾಪುರದಲ್ಲಿ ಸಿದ್ಧರಾಮೇಶ್ವರರು ದೇವರ ಅವತಾರ ಎತ್ತಿದ್ದಾರೆ. ಅವರ ನಡೆ, ನುಡಿ ಆಚಾರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕೆಂದು ಹೇಳಿದರು.

ಜಿಲ್ಲಾ ಬೋವಿ ವಡ್ಡರ್ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕುಸ್ತಿ ಮಾತನಾಡಿ, ಕಾಂಗ್ರೆಸ್ ಸರಕಾರದಿಂದ ನಮ್ಮ ಸಮಾಜದ ಭವ್ಯವಾದ ಭವನ ಕಟ್ಟಲು 5 ಕೋಟಿ ಬಿಡುಗಡೆ ಆಗಿದೆ. ಇನ್ನು ಉಳಿದ ಹಣ ನೀಡಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಶ್ರೀ ಸಿದ್ದರಾಮೇಶ್ವರ ಸರಕಾರಿ, ಅರೆ ಸರಕಾರಿ ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಶರಣಪ್ಪ ಗುಂಡುಗುರ್ತಿ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸ್ವಾಗತಿಸಿದರು.

ವೇದಿಕೆ ಮೇಲೆ ಅಪರ ಜಿಲ್ಲಾಧಿಕಾರಿಯಾದ ರಾಯಪ್ಪ ಹುಣಸಿಗಿ, ಜಿಲ್ಲಾಧಿಕಾರಿ ಕಚೇರಿಯ ಸಹಾಯಕರಾದ ಶಿವಪ್ರಭು ಹಿರೇಮಠ, ಮಹಾನಗರ ಪಾಲಿಕೆ ಸದಸ್ಯರಾದ ಹೊನ್ನಮ್ಮ ಹಾಗರಗಿ, ತಿಪ್ಪಣ್ಣ ಒಡೆಯರ್, ಸಂಜಯ್ ಮಂಜುಳಕರ್, ಗ್ಯಾರೆಂಟಿ ಯೋಜನೆ ಸದಸ್ಯ ರಾಜು ಗುತ್ತೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News