ಕಲಬುರಗಿ| ಶಾಲೆಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು
Update: 2026-01-14 18:12 IST
ಕಾಳಗಿ : ಪಟ್ಟಣದ ಭರತನೂರ ರಸ್ತೆ ಮಾರ್ಗದ ಅಂಬಾ ಭವಾನಿ ದೇವಸ್ಥಾನ ಬಳಿ ಇರುವ ದೇವರಾಜ್ ಮಾಲಿ ಪಾಟೀಲ್ ಪಿಯು ಕಾಲೇಜು ಹಾಗೂ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ರಾತ್ರಿ ವೇಳೆ ನುಗ್ಗಿದ ದುಷ್ಕರ್ಮಿಗಳು ಶಾಲೆಯಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ಡಿಎಮ್ ಪಾಟೀಲ್ ಶಾಲೆಗೆ ಮಂಗಳವಾರ ರಾತ್ರಿ ಬಾಗಿಲು ಮುರಿದು ನುಗ್ಗಿದ ದುಷ್ಕರ್ಮಿಗಳು ಶಾಲಾ ಕಿಟಕಿಯ ಗಾಜುಗಳು, ಕಂಪ್ಯೂಟರ್, ಪ್ರಿಂಟರ್ ಗೆ ಹಾನಿ ಮಾಡಿದ್ದಾರೆ. ಶೌಚಾಲಯದ ಬಾಗಿಲು, ವಿದ್ಯುತ್ ಸ್ವಿಚ್ ಬೋರ್ಡ್‌ಗಳನ್ನು ಕಿತ್ತು ಹಾಕಿದ್ದಾರೆ. ಇದರಿಂದ ಸುಮಾರು ಒಂದು ಲಕ್ಷ ರೂ. ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಕಾಳಗಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಯ್ಯ ಬಿಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.