×
Ad

ಕಲಬುರಗಿ | ಹಿರಿಯ ನಾಗರಿಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Update: 2025-07-20 22:13 IST

ಕಲಬುರಗಿ : ನಗರದ ಹಿಂದಿ ಪ್ರಚಾರ ಸಭೆಯ ಆವರಣದಲ್ಲಿರುವ ಜಿಲ್ಲಾ ಹಿರಿಯ ನಾಗರಿಕರ ಸಂಘದ ಮೂರು ವರ್ಷಗಳ ಅವಧಿಗೆ ಚುನಾವಣಾಧಿಕಾರಿ ದಾಮೋದರ ದೇಸಾಯಿಯವರ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಡಾ.ಪ್ರತಾಪ ಸಿಂಗ ತಿವಾರಿ, ಕಾರ್ಯದರ್ಶಿಯಾಗಿ ಕಲ್ಯಾಣರಾವ, ಉಪಾಧ್ಯಕ್ಷರಾಗಿ ಡಾ.ಎ.ಎಸ್. ಭದ್ರಶೆಟ್ಟಿ, ಡಾ.ಗಂಗಾ ಪೂಜಾರ, ಡಾ.ಜಾನಾಬಾಯಿ ವಾಘ್ಮೋರೆ, ಬಿ.ವಿಜಯಕುಮಾರ, ಭುವನೇಶ್ವರಿ ಚಿಮಕೋಡೆ,ಖಜಾಂಚಿಯಾಗಿ ನಾಗೇಂದ್ರಪ್ಪ ಬುಳ್ಳಾ, ಸಹ ಕಾರ್ಯದರ್ಶಿಗಳಾಗಿ ಸೋಮಶೇಖರ ನಂದಿಧ್ವಜ, ಪ್ರೊ.ಮಾಲಿಪಾಟೀಲ, ಶರಣಮ್ಮ ಕೋಳಕೂರ, ನಿರ್ದೇಶಕರಾಗಿ ಈರಣ್ಣ ರುದ್ರವಾಡಿ, ಶಕುಂತಲಾ ಮೋದಿ, ಭಾರತಿ ಒಂಟಗುಡಿ, ಭಜರಂಗ ಸಿಂಗ ಚವ್ಹಾಣ, ಶಿವಲಿಂಗಯ್ಯ ಮಠ ಆಯ್ಕೆಅವರನ್ನು ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News