ಕಲಬುರಗಿ | ಸಾಮಾಜಿಕ ನ್ಯಾಯಕ್ಕಾಗಿ ಸ್ಲಂ ಜನರ ಕುಂದುಕೊರತೆಗಳ ಸಭೆ
ಕಲಬುರಗಿ : ಸ್ಲಂ ಜನಾಂದೋಲನ ಕರ್ನಾಟಕ - ಕಲಬುರಗಿ ಘಟಕದಿಂದ ಶುಕ್ರವಾರ ನಗರದ ಜಗತ್ ವೃತ್ತದಲ್ಲಿರುವ ಪತ್ರಿಕಾ ಸಾಂಸ್ಕೃತಿಕ ಭವನದಲ್ಲಿ 'ಸಂವಿಧಾನ ಖಾತ್ರಿ ಸಾಮಾಜಿಕ ನ್ಯಾಯಕ್ಕಾಗಿ ಸ್ಲಂ ಜನರ ಕುಂದುಕೊರೆತೆಗಳ ಸಭೆ'ಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಅಲ್ಲಮ ಪ್ರಭು ಪಾಟೀಲ್ ಅವರ ಪುತ್ರ ಶರಣು ಪಾಟೀಲ್, ಸ್ಲಂ ಜನರಲ್ಲಿ ಶಿಕ್ಷಣದ ಕೊರತೆ ಹೆಚ್ಚಾಗಿ ಕಾಣುತ್ತದೆ. ತಾಯಿಐಿಂದು ಮೊದಲು ಮಕ್ಕಳಿಗೆ ವಿದ್ಯೆಕೊಡಿಸಬೇಕು, ಆಗ ಮಾತ್ರ ಮುಂದಿನ ದಿನಗಳಲ್ಲಿ ನಮ್ಮ ಕುಂದುಕೊರತೆಗಳು ಪರಿಹಾರವಾಗಲು ಸಾಧ್ಯ ಎಂದರು.
ಅಲ್ಲದೆ, ಬಾಬಾ ಸಾಹೇಬರು ಬರೆದ ಸಂವಿಧಾನದಿಂದಲೇ ಘನತೆಯಿಂದ ಬದುಕಲು ಸಾದ್ಯವಾಗಿದೆ, ಅದೇ ರೀತಿ ಸಂವಿಧಾನಬದ್ದ ಹಕ್ಕು ಗಳು ಪಡೆಯುತ್ತೇವೆಂದು ಹೇಳಿದರು.
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿರುವ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಶ್ರೀಧರ್ ಮಾತನಾಡಿ, ಸ್ಲಂ ಜನರಿಗೆ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ಸಿಗಬೇಕಾದ ಸೌಲಭ್ಯಗಳನ್ನು ದೊರೆಯುವಂತೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಅಘೋಷಿತ ಸ್ಲಂಗಳನ್ನು ಘೋಷಣೆ ಮಾಡಲು ಸಂಬಂದ ಪಟ್ಟ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ್ದೇವೆ, ಶೀಘ್ರದಲ್ಲಿ ಅಘೋಷಿತ ಸ್ಲಂಗಳನ್ನು ಮಾಡಿಸುತ್ತೇವೆಂದು ಭರವಸೆ ನೀಡಿದರು.
ರಾಜ್ಯ ಸಂಘಟನಾ ಸಂಚಾಲಕರಾದ ಜನಾರ್ದನ ಹಳ್ಳಿಬೆಂಚಿ ಮಾತನಾಡಿ, ವೇದಿಕೆ ಮೇಲೆ ಉಪಸ್ಥಿತರಿದ್ದ ಅಧಿಕಾರಿಗಳು ಈ ಸಭೆಯ ಸ್ಲಂ ಜನರ ಕುಂದುಕೊರತೆಗಳನ್ನು ಶೀಘ್ರದಲ್ಲಿ ಪರಿಹಾರ ಮಾಡಬೇಕು, ಸಂಘಟನೆಯಿಂದ ಹಲವಾರು ಹೋರಾಟಗಳ ಮುಖಾಂತರ ಮನವಿಗಳನ್ನು ನೀಡಲಾಗಿದೆ, ಆದರೆ ಅಧಿಕಾರಿಗಳನ್ನು ಒಂದುಗೂಡಿಸಿ ಸಮಸ್ಯೆಗಳು ಪರಿಹಾರಕ್ಕೆ ವೇದಿಕೆ ರೂಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರೇಣುಕಾ ಸರಡಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶರಣು ಸ್ವಾಗತಿಸಿದರು.