ಕಲಬುರಗಿ | ಭಾರೀ ಮಳೆಗೆ ಮನೆ ಕುಸಿತ : ಬಾಲಕ ಮೃತ್ಯು, ಮಹಿಳೆಗೆ ಗಂಭೀರ ಗಾಯ
Update: 2025-06-17 18:55 IST
ಕಲಬುರಗಿ : ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ಬಾಲಕನೋರ್ವ ಮೃತಪಟ್ಟಿರುವ ಘಟನೆ ಜೇವರ್ಗಿ ತಾಲೂಕಿನ ಗುಡೂರ ಗ್ರಾಮದಲ್ಲಿ ನಡೆದಿದೆ.
ಗುಡೂರ ಗ್ರಾಮದ 11 ವರ್ಷದ ಬಾಲಕ ಚಂದ್ರಶೇಖರ್ ಶಿವಣ್ಣ ಹವಾಲ್ದಾರ್ ಮೃತಪಟ್ಟಿದ್ದು, 60 ವರ್ಷದ ಅಜ್ಜಿ ಭಾಗಮ್ಮ ಎಂಬುವವರಿಗೆ ಗಂಭೀರ ಗಾಯವಾಗಿವೆ. ಗಾಯಗೊಂಡ ಮಹಿಳೆಯನ್ನು ಕಲಬುರಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.