ಕಲಬುರಗಿ | ನರೋಣದಲ್ಲಿ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
ಕಲಬುರಗಿ : ಡಾ.ಅಂಬೇಡ್ಕರ್ ಕ್ರಾಂತಿಕಾರಿ ಯುವಕ ಸಂಘ ನರೋಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ನೆಹರು ಯುವ ಕೇಂದ್ರ ಕಲಬುರಗಿ ಸಂಯುಕ್ತಾಶ್ರಯದಲ್ಲಿ ಶನಿವಾರ ಆಳಂದ ತಾಲ್ಲೂಕಿನ ನರೋಣ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಹಾಗೂ ವಿವಿಧ ಕಲಾವಿದರಿಂದ ಸಂಸ್ಕೃತಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಹಿರಿಯ ಮುಖಂಡ ಶರಣಗೌಡ ಪಾಟೀಲ್ ದನ್ನೂರು ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಮಂಜುನಾಥ್ ಬಿ.ಕೊರೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ದಲಿತ ಯುವ ಮುಖಂಡ ಕೈಲಾಸ ರಾಗಿ, ಕೆಎಸ್ಡಿಎಸ್ಎಸ್ ತಾಲೂಕು ಸಂಚಾಲಕ ಶಿವಪುತ್ರ ಬಿ.ರಾಗಿ, ಆರೋಗ್ಯ ಇಲಾಖೆಯ ಚಂದ್ರಕಾoತ ಕೊರೆ ಮತ್ತು ಶಾಲೆಯ ಮುಖ್ಯಗುರು ಶರಣಪ್ಪ ಯಕ್ಕಂಚಿ, ವಿಶೇಷ ಅತಿಥಿಗಳಾಗಿ ಮನೋಹರ ಮೂಲಭಾರತಿ, ಕಿರಣ ವಾಲಿ, ಚಂದ್ರಕಾoತ ಹಾದಿಮನಿ, ಶಿವಕುಮಾರ್ ಬಿಲಗುಂದಿ, ರಾಜಕುಮಾರ್ ತಲ್ವಾರ್, ಮತ್ತು ಸಂಜುಕುಮಾರ್ ಹಾದಿಮನಿ ಭಾಗವಹಿಸಿದರು. ಡಾ.ಅಂಬೇಡ್ಕರ್ ಕ್ರಾಂತಿಕಾರಿ ಯುವಕ ಸಂಘದ ಅಧ್ಯಕ್ಷ ವಿಜಯಕುಮಾರ್ ಮೇಲಕೆರಿ ಸ್ವಾಗತಿಸಿ ಕಾರ್ಯಕ್ರಮಕ್ಕೆ ಮುನ್ನೋಟ ನೀಡಿದರು.
ಬಳಿಕ ಕ್ರೀಡಾಕೂಟ ನಡೆಯಿತು. ಪಾಲ್ಗೊಂಡಿದ್ದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.