×
Ad

ಕಲಬುರಗಿ | ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ

Update: 2025-01-03 19:25 IST

ಕಲಬುರಗಿ : ನಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ನೂತನ ನಿರ್ದೇಶಕರಿಗೆ ಸ್ವಾಗತ ಸಮಾರಂಭ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಳೂಂಡಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯುವುದು ಅನಿವಾರ್ಯ, ಇದರಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಜಿಲ್ಲೆಯ ನೌಕರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವುದರ ಜೊತೆಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲು ಕರೆ ನೀಡಿದರು.

ಇಂದಿನ ಸಭೆಯಲ್ಲಿ ಸುಮಾರು 65 ಕ್ಕಿಂತ ಹೆಚ್ಚಿನ ನಿರ್ದೇಶಕರು ಆಗಮಿಸಿದ್ದು ಸಂತೋಷದಾಯಕ. ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯ ಎಲ್ಲಾ ಸಧ್ಯಸರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕೆಲಸ ಕಾರ್ಯಗಳು ನಿರ್ವಹಿಸುತ್ತೆವೆ ಎಂದು ಹೇಳಿದರು.

ವೇದಿಕೆಯ ಮೇಲೆ ಜಿಲ್ಲಾ ಖಜಾಂಚಿ ಶ್ರೀಮಂತ ಪಟ್ಟೇದಾರ, ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ, ಪ್ರಧಾನ ಕಾರ್ಯದರ್ಶಿ ಮಹೇಶ ಹೂಗಾರ, ತಾಲೂಕಗಳ ಅಧ್ಯಕ್ಷರಾದ ಸತೀಶ ಷಣ್ಮುಖ, ಸಂಜೀವ ಬಗಲಿ, ದಾನಪ್ಪಗೌಡ, ಮಿಟ್ಟುಸಾಬ್ ಮುಲ್ಲಾ, ಅನೀಲ ಕುಮಾರ್ ಗುತ್ತೇದಾರ ಅರವಿಂದ ಕುಮಾರ್ ಪಸಾರ, ಶಿವಕುಮಾರ ಡಂಬಳ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಇಂದಿನ ಪ್ರಥಮ ಸಭೆಯಲ್ಲಿ ಸುಮಾರು 9 ಕ್ಕಿಂತ ಹೆಚ್ಚಿನ ವಿಷಯಗಳ ನಡಾವಳಿಗಳಿಗೆ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯ ಒಪ್ಪಿಗೆಯನ್ನು ಪಡೆಯಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News