ಕಲಬುರಗಿ | ರೋಗ, ವ್ಯಸನ ಮುಕ್ತ ಸಮಾಜ ಕಟ್ಟುವುದು ಅಗತ್ಯ : ಫಾದರ್ ಡಾ.ಅನಿಲ್ ಕ್ರಾಸ್ತಾ
ಕಲಬುರಗಿ : ಸಂತ ಮದರ್ ತೆರೇಸಾರವರ ಜೀವನ ಪ್ರೇರಣೆಯಿಂದ ಕೂಡಿರುವ ಕ್ಯಾಥೊಲಿಕ್ ಧರ್ಮಕ್ಷೇತ್ರದ ಆಶ್ರಯದ ಮದರ್ ತೆರೇಸಾ ಚಾರಿಟೇಬಲ್ ಆಸ್ಪತ್ರೆ ಮತ್ತು ಸಂಸ್ಥೆ ಬಡ ಹಾಗೂ ದುರ್ಬಲ ಜನರಿಗೆ ಉತ್ತಮ ರೀತಿಯ ಆರೋಗ್ಯ ಮತ್ತು ಭರವಸೆಯ ಜೀವನದ ವಾತಾವರಣ ನಿರ್ಮಿಸುವ ಗುರಿ ಸಂಸ್ಥೆ ಹೊಂದಿದೆ ಎಂದು ಮದರ್ ತೆರೇಸಾ ಚಾರಿಟೇಬಲ್ ಆಸ್ಪತ್ರೆ ಮತ್ತು ಸಂಸ್ಥೆಯ ನಿರ್ದೇಶಕರಾದ ಫಾದರ್ ಡಾ.ಅನಿಲ್ ಕ್ರಾಸ್ತಾ ಹೇಳಿದರು.
ಶುಕ್ರವಾರ ಉಪಳಾಂವ ಪ್ರದೇಶದಲ್ಲಿರುವ ಮದರ್ ತೆರೇಸಾ ಚಾರಿಟೇಬಲ್ ಆಸ್ಪತ್ರೆ ಮತ್ತು ಸಂಸ್ಥೆ ಕಚೇರಿಯಲ್ಲಿ ಮದರ್ ತೆರೇಸಾ ಅವರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮದರ್ ತೆರೇಸಾ ಚಾರಿಟೇಬಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ, ಸ್ತ್ರೀರೋಗ, ಮಕ್ಕಳ ಚಿಕಿತ್ಸೆ, ಫಿಸಿಯೋಥರಪಿ, ಕಣ್ಣಿನ ಪೊರೆ, ದಂತ ಚಿಕಿತ್ಸೆ, ಸ್ಟೋಕ್ ರಿಕವರಿ, ಬೆನ್ನು ಮೂಳೆ ಮುರಿತ, ಮಾನಸಿಕ ಆರೋಗ್ಯ ಪುನಶ್ವೇತನ ಮತ್ತು ವ್ಯಸನಮುಕ್ತದಂತಹ ಕಾರ್ಯಕ್ರಮಗಳು ನಡೆಸುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ದುರ್ಬಲರು ಮತ್ತು ಹಿಂದುಳಿದ ಸಮುದಾಯಗಳಿಗೆ ರೋಗ ತಡೆಗಟ್ಟುವ (ಮುನ್ನೆಚ್ಚರಿಕೆಯ), ಚಿಕಿತ್ಸೆ, ಪುನಶ್ವೇತನ, ಮನೆ ಆಧಾರಿತ ಮತ್ತು ನಿರಂತರ ಆರೈಕೆ, ಶಿಕ್ಷಣ ಮತ್ತು ಸಾಮರ್ಥ್ಯ ನಿರ್ಮಾಣ ಮತ್ತು ಮಿತ ವೆಚ್ಚದ ಆರೋಗ್ಯ ಸೇವೆ ನೀಡುವ ಹಿನ್ನೆಲೆಯಲ್ಲಿ ಆಸ್ಪತ್ರೆ ಮತ್ತು ಟ್ರಸ್ಟ್ ಪೂರ್ಣ ಪ್ರಮಾಣದಲ್ಲಿ ಸಮುದಾಯದ ಆರೋಗ್ಯ ಮತ್ತು ರೋಗ ತಡೆಗಟ್ಟುವು ನಿಟ್ಟಿನಲ್ಲಿ ಆರೋಗ್ಯ ಶಿಕ್ಷಕರಿಂದ 300 ಹಳ್ಳಿಗಳಲ್ಲಿ ಪೌಷ್ಠಿಕ ಆಹಾರ, ಯೋಗ, ಜೈವಿಕ ಕೃಷಿ ಉತ್ಪನ್ನ, ಪಾರಂಪರಿಕ ಗಿಡಮೂಲಿಕೆ ಔಷಧಿ ಮತ್ತು ಆಯುರ್ವೆದದ ಉಪಚಾರವನ್ನು ಪರಿಚಯಿಸುವ ಅಭಿಯಾನ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪ್ರಾಯೋಗಿಕವಾಗಿ 100 ಮನೆಗಳಿಗೆ ಪೌಷ್ಟಿಕ ಆಹಾರ ತಯಾರಿಕೆ ಮಾಡುವ ತರಬೇತಿ, ಅಂಗವಿಕಲರಿಗೆ ಫಿಜಿಯೋ ಥೆರಪಿ, ಮನೋ ಸ್ಪರ್ಶ, ಮನಸಧಾರ ಉದ್ಯೋಗ ಕಂಪ್ಯೂಟರ್, ಬೆಣದ ಬತ್ತಿ ತಯಾರಿಗೆದಂತಹ ಸಮುದಾಯ ಆಧಾರಿತ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಭೂಮಿಕಾ ತಂಡದಿಂದ ಪ್ರಾರ್ಥನೆ ಗೀತೆ ಹಾಡಿದರು. ಶಿವರಾಜ್ ವರ್ಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದ್ದರು.
ಈ ಸಂದರ್ಭದಲ್ಲಿ ಸಿಸ್ಟರ್ ಸೇಲಿನ್, ನೃಪತುಂಗ ಪತ್ರಿಕೆ ಸಂಪಾದಕ ಅವಿನಾಶ್ ದೊಡ್ಡಮನಿ, ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಗಳು ಉಪಸ್ಥಿರಿದ್ದರು.