×
Ad

ಕಲಬುರಗಿ | ಪತ್ರಕರ್ತರು ಸುದ್ದಿಗಳ ಗೌಪ್ಯತೆ ಕಾಪಾಡುತ್ತಿಲ್ಲ: ಚಿನಿವಾರ್ ಕಳವಳ

Update: 2025-07-23 20:51 IST

ಕಲಬುರಗಿ: ಮುದ್ರಣ ಹಾಗೂ ದೃಶ್ಯ ಮಾಧ್ಯಮದ ಪತ್ರಕರ್ತರು ಸುದ್ದಿಗಳ ಗೌಪ್ಯತೆಯನ್ನು ಕಾಪಾಡುತ್ತಿಲ್ಲ ಎಂದು ಹಿರಿಯ ಪತ್ರಕರ್ತ ಬಸವರಾಜ್ ಚಿನಿವಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಯಾದಗಿರಿಗೆ ವರ್ಗಾವಣೆಗೊಂಡ ಪ್ರಜಾವಾಣಿ ವರದಿಗಾರ ಮಲ್ಲಿಕಾರ್ಜುನ್ ನಾಲವಾರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಹಮ್ಮಿಕೊಂಡ ಬೀಳ್ಕೊಡುಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದಲೂ ಮುದ್ರಣ ಮಾಧ್ಯಮದ ಪತ್ರಕರ್ತರು ತಮ್ಮ ಸುದ್ದಿಗಳ ಗೌಪ್ಯತೆಯನ್ನು ಪತ್ರಿಕೆಗಳು ಪ್ರಕಟಗೊಳ್ಳುವವರೆಗೂ ಕಾಪಾಡಿಕೊಳ್ಳುತ್ತಿದ್ದರು ಎಂದರು.

ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡುವಂತಹ ಉತ್ತಮ ಪತ್ರಕರ್ತರಿದ್ದಾರೆ. ಆದಾಗ್ಯೂ, ಅವರಿಗೆ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಹಳೆಯ ಮೈಸೂರು ಭಾಗದವರು ಮತ್ತು ಮಧ್ಯ ಕರ್ನಾಟಕದವರಿಗೆ ಸ್ಥಾನಿಕ ಸಂಪಾದಕರನ್ನಾಗಿ ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಧೀಮಂತ ಪತ್ರಕರ್ತರಿಗೆ ಸಾಕಷ್ಟು ಅನ್ಯಾಯವನ್ನೂ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ರಮೇಶ್ ಮೇಳಕುಂದಾ, ಬ್ರಹ್ಮಾನಂದ್ ಅರಳಿ, ಪ್ರವೀಣರೆಡ್ಡಿ, ಓಂಪ್ರಕಾಶ್ ಮುನ್ನೂರ್, ಬಜರಂಗಬಲಿ, ದತ್ತಾತ್ರೇಯ್ ಪಾಟೀಲ್, ಸಿದ್ದು ಸಾತಿಹಾಳ್, ದೇವಿಂದ್ರ ಜಾಡಿ, ದಸ್ತಗೀರ್ ನದಾಫ್, ಸೋಮೇಶ್ ಪಾಟೀಲ್, ಬಾಬುರಾವ್ ಕೋಬಾಳ್, ಶರಣಯ್ಯ ಸ್ವಾಮಿ ಹಿರೇಮಠ್,ಪ್ರವೀಣ್ ಪುಣೆ, ಅನಿಲ್ ಸ್ವಾಮಿ, ಪುರುಷೋತ್ತಮ್ ಮುಂತಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರವೀಣ್ ಪಾರಾ, ಶಿವರಂಜನ್ ಸತ್ಯಂಪೇಟೆ, ಸಂಗಮನಾಥ ರೇವತಗಾಂವ್, ಗಂಗಾಧರ್ ಹಿರೇಮಠ್, ಮಹೇಶ್ ಚೌಕಿಮಠ್, ಶಂಕರಬಾಬು ರೆಡ್ಡಿ, ವಿಜಯಕುಮಾರ್ ಗಾಜರೆ, ಬಿರಾದಾರ್ ಶಿವಕುಮಾರ್, ರಾಚಪ್ಪ ಜಂಬಗಿ, ಶಿವಕುಮಾರ್ ಯಲ್ದೆ ಮುಂತಾದವರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News