ಕಲಬುರಗಿ | ಜ್ಞಾನವು ಜೀವನ ಪರ್ಯಂತ ಇರುತ್ತದೆ: ಪಂಡಿತ್ ಬುದಿಸ್ವಾಮಿ
ಕಲಬುರಗಿ : ನಮ್ಮ ಜೀವನ ಪರ್ಯಂತ ನಮ್ಮ ಜೊತೆ ಇರುವುದು ಜ್ಞಾನ, ಅಂತಹ ಜ್ಞಾನವನ್ನು ನೀಡುತ್ತಿರುವ ಶರಣಬಸವ ವಿಶ್ವ ವಿದ್ಯಾಲಯ ಕಾರ್ಯ ಶ್ಲಾಘನಿಯ ಎಂದು ಹುಡಿಗೇರೆಯ ದೈವಾ ಸಂಸ್ಕೃತಿ ಸಂಸ್ಥಾನದ ಸಂಸ್ಥಾಪಕ ಅಧ್ಯಕ್ಷರಾದ ಜ್ಯೋತಿಷ್ಯ ಜ್ಞಾನಿ ಪಂಡಿತ್ ಬುದಿಸ್ವಾಮಿ ಅಭಿಪ್ರಾಯ ಪಟ್ಟರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನ ವಿಭಾಗ ಅನುಭವ ಮಂಟಪದಲ್ಲಿ ನಡೆದ ವೇದ ವಿಜ್ಞಾನ ಮತ್ತು ಸಂಖ್ಯಾಶಾಸ್ತ್ರ ಮಹತ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ವಿದ್ಯಾರ್ಥಿಗಳು ಜ್ಯೋತಿಷ್ಯ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಕಲಿತು ಸಂಸ್ಥಾನದ ಹೆಸರು ಉತ್ತುಂಗಗೊಳಿಸಬೇಕು ಎಂದು ಹೇಳಿದರು.
ಖ್ಯಾತ ವೈದ್ಯರಾದ ಡಾ. ಉಮಾದೇಶಮುಖ, ಸಮಾಜ ವಿಜ್ಞಾನ ನಿಕಾಯಕರಾದ ಟಿ.ವಿ. ಶಿವಾನಂದನ್ ಮಾತನಾಡಿದರು.
ವೈದಿಕ ವಿಭಾಗದ ಮುಖ್ಯಸ್ಥರಾದ ಡಾ.ಚಂಪಾರಾಣಿ ಮಾತನಾಡಿದರು. ಪ್ರೊ.ಸಿದ್ದಮ್ಮ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗದ ಚೇರಪರ್ಸನ ಡಾ.ಸುನಿತಾ ಬಿ.ಪಾಟೀಲ, ಪ್ರೊ.ಅಶ್ವಿನಿ ರೆಡ್ಡಿ, ಅನಿತಾ ಗೈದನಕರ್, ಡಾ ಸವಿತಾ ಪಾಟೀಲ, ಮಹೇಶ ರಾವೂರ, ಡಾ.ನಾಗಬಸವಣ್ಣ ಗುರಾಗೋಳ ಇತರರು ಉಪಸ್ಥಿತರಿದ್ದರು.