ಕಲಬುರಗಿ| ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಸ್ತಾದ್ ಅವರಿಗೆ ಸನ್ಮಾನ
Update: 2025-08-27 19:39 IST
ಕಲಬುರಗಿ: ಇತ್ತೀಚೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಯಾಗಿ ನೇಮಕಗೊಂಡ ಪ್ರೊ. ಅಬ್ದುಲ್ ರಬ್ ಉಸ್ತಾದ್ ಅವರನ್ನು, ಕಲಬುರಗಿಯ ಕಲಾವಿದರು ಸನ್ಮಾನಿಸಿದರು.
ಕಲಾವಿದರಾದ ರಾಜಶೇಖರ್ ಎಸ್., ಟಿ. ದೇವೇಂದ್ರ, ಮುಹಮ್ಮದ್ ಆಯಾಝುದ್ದೀನ್ ಪಟೇಲ್, ರೆಹಮಾನ್ ಪಟೇಲ್, ಶರಣು ಮತ್ತು ಶಹ್ರಿಯಾರ್ ಉಸ್ತಾದ್ ಈ ಸಂದರ್ಭದಲ್ಲಿ ಹಾಜರಿದ್ದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಉರ್ದು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಉಸ್ತಾದ್ ಇತ್ತೀಚೆಗೆ ಕುಲಪತಿಯಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ಸ್ವೀಕರಿಸಿದ್ದಾರೆ. ಅವರ ಈ ಸಾಧನೆಗೆ ಕಲಬುರಗಿಯ ಕಲಾವಿದರು ಅಭಿನಂದಿಸಿದರು.