×
Ad

ಕಲಬುರಗಿ | ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಮೂಡಿಸಲು ಕಲಿಕಾ ಹಬ್ಬ ಸಹಕಾರಿ : ಪರಮೇಶ್ವರ್ ಓಕಳಿ

Update: 2025-03-08 21:19 IST

ಕಲಬುರಗಿ : ಪ್ರಾಥಮಿಕ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರಹಾಕಲಿಕ್ಕೆ ಹಾಗೂ ಕಲಿಕೆಯನ್ನು ಆಸಕ್ತಿ ಮೂಡಿಸುವಲ್ಲಿ ಕಲಿಕೆಯ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಮಲಾಪುರ ತಾಲೂಕು ಅಧ್ಯಕ್ಷ ಪರಮೇಶ್ವರ್ ಓಕಳಿ ಹೇಳಿದರು.

ಕಮಲಾಪುರ ತಾಲೂಕಿನ ನಾಗೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ʼಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಮೂಲಾಕ್ಷರಗಳ ಓದು ಬರಹದ ಕೌಶಲ್ಯಗಳನ್ನು ಬೆಳೆಸಲು ಸಹ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದರು.

ಬಿ ಆರ್ ಸಿ ತನುಜಾ ಮಾತನಾಡಿ, ಮಕ್ಕಳಲ್ಲಿ ಕಲಿಕೆಯ ಕುರಿತು ಆಸಕ್ತಿ ಮೂಡಿಸುವುದು ಜೊತೆಗೆ ಅವರಲ್ಲಿನ ಸೃಜನಶೀಲತೆಯನ್ನು ಹೊರಹಾಕಲು ಕಲಿಕಾ ಚಟುವಟಿಕೆ ಮುಖ್ಯವಾಗಿದೆ ಎಂದು ಹೇಳಿದರು. ಮುಖ್ಯಗುರು ಸೂರ್ಯಕಾಂತ್ ಪಂಚಾಳ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ ನಾಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ ಹೊಸಮನಿ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಿಥ್ಯಸಾಬ್ ಮುಲ್ಲಾ, ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ಮೆಹಬೂಬ್ ಮಡಕಿ, ಎಸ್ ಡಿ ಎಂ ಸಿ ಅಧ್ಯಕ್ಷ ಅರವಿಂದ ಜಡಿ, ನಾಗೂರ್ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರು ಜಗನ್ನಾಥ್, ಆನಂದ್ ಧನ್ನಿ, ಶರಣಬಸಪ್ಪ ನಿಂಗಶೆಟ್ಟಿ ಇತರರು ಇದ್ದರು.

ವಿಶ್ವನಾಥ್ ರಾಥೋಡ ನಿರೂಪಿಸಿದರು. ಸಿ ಆರ್ ಸಿ ಹಣಮಂತ್ ಭುವಟೆ ಪ್ರಾಸ್ತವಿಕವಾಗಿ ಮಾತನಾಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News