×
Ad

ಕಲಬುರಗಿ | ಕೆಆರ್‌ಐಡಿಎಲ್ ಕಚೇರಿಗೆ ಲೋಕಾಯುಕ್ತ ಎಸ್ಪಿ ದಿಢೀರ್ ಭೇಟಿ : ಪರಿಶೀಲನೆ

Update: 2025-08-19 19:36 IST

ಕಲಬುರಗಿ: ಕರ್ನಾಟಕ ಲೋಕಾಯುಕ್ತ ಕಲಬುರಗಿ ಎಸ್ಪಿ ಸಿದ್ದರಾಜು ಅವರು ಇಲ್ಲಿನ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್ ಐಡಿಎಲ್) ಕಚೇರಿಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಐದು ತಂಡಗಳ ನೇತೃತ್ವದಲ್ಲಿ ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಾರ್ಯಾಲಯದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳು ಪ್ರಗತಿ ಪರಿಶೀಲನೆಯ ದಾಖಲೆಗಳು, ವಿಭಾಗೀಯ ಹಾಗೂ ಉಪ ವಿಭಾಗೀಯಗಳಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಡಿವೈಎಸ್ಪಿಗಳಾದ ಗೀತಾ ಬೆನಾಳ, ಡಿವೈಎಸ್ಪಿ ಶೀಲವಂತ, ರಾಜಶೇಖರ್ ಹಳೆಗೋದಿ, ಪೊಲೀಸ್ ಇನ್‌ಸ್ಪೆಕ್ಟರ್ ಅಕ್ಕಮಹಾದೇವಿ, ಪ್ರದೀಪ, ಬಸವರಾಜ್, ಮಸೂದ್ ಯಮನೂರಪ್ಪ, ರಾಣೋಜಿ, ರಾಜೇಶ್, ಸೇರಿದರೆ ಅಭಿಯಂತರ ಅಧಿಕಾರಿಗಳು ಸ್ಥಳದಲ್ಲಿ ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News