×
Ad

ಕಲಬುರಗಿ | ʼಮಾನಸಧಾರ ಡೇ ಕೇರ್ ಸೆಂಟರ್ʼ ಉದ್ಘಾಟನೆ

Update: 2025-10-06 20:31 IST

ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮದರ್ ತೆರೆಸಾ ಚಾರಿಟೇಬಲ್ ಆಸ್ಪತ್ರೆ ಟ್ರಸ್ಟ್ ಅವರ ಸಹಯೋಗದಲ್ಲಿ ಮಾನಸಿಕ ರೋಗಿಗಳ ಹಾಗೂ ಅವರ ಆರೈಕೆದಾರರ ಕೌಶಲ್ಯ ಅಭಿವೃದ್ದಿಗಾಗಿ ನೀಯೊಜಿಸಿರುವ "ಮಾನಸಧಾರ ಡೇ ಕೇರ್ ಸೆಂಟರ್ʼ ಅನ್ನು ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಶರಣಬಸಪ್ಪ ಕ್ಯಾತನಾಳ ಅವರು ಸೇಂಟ್ ಮೇರಿ ಶಾಲೆಯ ಆವರಣದಲ್ಲಿರುವ ಸಂಸ್ಥೆಯ ಕಚೇರಿಯನ್ನು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮದರ ತೆರೆಸಾ ಚಾರಿಟೇಬಲ್ ಆಸ್ಪತ್ರೆ ಸಂಸ್ಥೆಗೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಸೇವಾ ಹಿನ್ನಲೆಯನ್ನು ಹೊಂದಿದ್ದು, ಮಾನಸಧಾರಾ ಡೇ ಕೇರ್‌ ಸೇಂಟರ್‌ ಗಳನ್ನು ಕೂಡ ಸಂಸ್ಥೆಯು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಕು.ಆಶಾ ಮತ್ತು ಸಂಗಡಿಗರಿoದ ಪ್ರಾರ್ಥನೆ ಗೀತೆ ಹಾಡಲಾಯಿತು. ಫಾದರ್‌ ಸ್ಟ್ಯಾನಿ ಲೋಬೊ ಅವರು ಮಾತನಾಡಿ, ಸಂಸ್ಥೆಯು ಹೆಚ್ಚಿನ ಜನರಿಗೆ ಉಪಯುಕ್ತವಾಗಲಿ ಮತ್ತು ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಆಶಿರ್ವಚನವನ್ನು ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ವಿವೇಕಾನಂದ ರೆಡ್ಡಿ, ಮನೊವೈದ್ಯಕೀಯ ಸಮಾಜ ಕಾರ್ಯಕರ್ತ ನಾಗರಾಜ ಬಿರಾದಾರ ಇದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಮದರ ತೆರೆಸಾ ಚಾರಿಟೇಬಲ್ ಆಸ್ಪತ್ರೆ ಟ್ರಸ್ಟನ ನಿರ್ದೇಶಕರಾದ ಡಾ.ಅನೀಲ ಕ್ರಾಸ್ತಾರ ಸರ್ವರನ್ನು ಸ್ವಾಗತಿಸಿ ಅತಿಥಿಗಳನ್ನು ಸನ್ಮಾನಿಸಿದರು, ಶಿವರಾಜ ವರ್ಮಾ ಕಾರ್ಯಕ್ರಮನ್ನು ನಿರೂಪಿಸಿದರು. ಸಿಸ್ಟರ್ ಸೇಲಿನ ಅವರು ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News