×
Ad

ಕಲಬುರಗಿ | ಆದರ್ಶ ವ್ಯಕ್ತಿಗಳ ಬಾಳು ನಮಗೆ ಆದರ್ಶವಾಗಲಿ: ಡಾ.ಶರಬಯ್ಯ ಸ್ವಾಮಿ

ಶರಣಬಸವ ವಿವಿಯ ಎಂಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Update: 2025-09-18 19:39 IST

ಕಲಬುರಗಿ: ಆದರ್ಶ ವ್ಯಕ್ತಿಗಳ ಜೀವನವೇ ನಮಗೆ ಆದರ್ಶವಾಗಬೇಕು ಎಂದು ಚಾಂದ ಬೀಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶರಬಯ್ಯ ಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಎಂ.ಎ. ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕದಲ್ಲಿಯೇ ಅಲ್ಲ, ಭಾರತ ಮಟ್ಟದಲ್ಲೂ ಶರಣಬಸವ ವಿಶ್ವವಿದ್ಯಾಲಯವು ಉತ್ತಮ ಖ್ಯಾತಿ ಪಡೆದಿದೆ. ಇಲ್ಲಿ ಕಲಿತ ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನ ಕಟ್ಟಿಕೊಳ್ಳಿ. ಪ್ರತಿಯೊಬ್ಬರೂ ಉದಾತ್ತ ಆದರ್ಶಗಳು, ಉತ್ತಮ ಜೀವನ ಮೌಲ್ಯಗಳು ಮತ್ತು ಸಮಾಜಮುಖಿ ಕಾರ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ತಾಂತ್ರಿಕತೆ ಅಗತ್ಯ :

ಕಾರ್ಯಕ್ರಮವನ್ನು ಉದ್ಘಾಟಿಸಿದ ಶರಣಬಸವ ವಿವಿಯ ಕುಲಸಚಿವ (ಮೌಲ್ಯಮಾಪನ) ಡಾ.ಎಚ್.ಎಸ್.ಹೊನ್ನಳ್ಳಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆಯಲು ತಾಂತ್ರಿಕ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ :

ಅಧ್ಯಕ್ಷತೆಯನ್ನು ವಹಿಸಿದ ವಿಭಾಗದ ಮುಖ್ಯಸ್ಥೆ ಡಾ.ಸುಮಂಗಲಾ ಎನ್.ರಡ್ಡಿ ಅವರು, ಎಂ.ಎ. ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿವಿಯ ಹೆಸರನ್ನು ಬೆಳಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಕೆ-ಸೆಟ್ ಮತ್ತು ನೆಟ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ನಿರೂಪಣೆಯನ್ನು ಕುಮಾರಿ ಮಮತಾ ಭವಾನಿ ನೆರವೇರಿಸಿದರು. ಸ್ವಾಗತವನ್ನು ಶ್ರೀಶೈಲ, ಪ್ರಾಸ್ತಾವಿಕವನ್ನು ಸಾಕ್ಷಿ ಗೌಳಿ, ವಂದನಾರ್ಪಣೆಯನ್ನು ಸಿದ್ದಪ್ಪ ಮಾಡಿದರು.

ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಭಾವತಿ ಚಿತಕೋಟಿ, ಡಾ.ಚಿದಾನಂದ ಚಿಕ್ಕಮಠ, ಡಾ.ಚನ್ನಮ್ಮ ಎನ್. ಅಲ್ಬಾ, ಡಾ.ಕರೆಯಣ್ಣ ದೇವಪುರ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News