×
Ad

ಕಲಬುರಗಿ: ಮಾನವ ಕಳ್ಳ ಸಾಗಣಿಕೆ ತಡೆ ಕುರಿತು ಕರಪತ್ರ ಬಿಡುಗಡೆ

Update: 2025-07-31 14:08 IST

ಕಲಬುರಗಿ: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ 1098/112, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೂಸೈಟಿ, ರೈಲ್ವೆ ಇಲಾಖೆ, ಆರ್. ಪಿ. ಎಫ್, ಜಿ. ಆರ್. ಪಿ, ಮಾರ್ಗದರ್ಶಿ ಸಂಸ್ಥೆ, ಜಸ್ಟ ರೈಟ್ಸ್ ಫಾರ ಚಿಲ್ಡ್ರನ್, ಡಾನ ಬಾಸ್ಕೊ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ "ವಿಶ್ವ ಮಾನವ ಕಳ್ಳ ಸಾಗಣೆ ವಿರೋಧಿ ದಿನ" ಆಚರಣೆಯು ಕೇಂದ್ರ ರೈಲ್ವೆ ನಿಲ್ದಾಣ ಪ್ತತಿಕ್ಷಾಸ್ಥಳದಲ್ಲಿ ಹಾಲ್‍ನಲ್ಲಿ ನಡೆಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾನವ ಕಳ್ಳ ಸಾಗಣಿಕೆ ತಡೆ ಕುರಿತು ಕರಪತ್ರ ಬಿಡುಗಡೆ ಮಾಡಿದರು.

ಕಲಬುರಗಿ ಯಿಂದ ಗಾಣಗಾಪುರ, ವಾಡಿ, ಸೋಲಾಪುರ, ಮಂತ್ರಾಲಯ, ಬೀದರ್ ಹಾಗೂ ತಾಂಡೂರ್ ವರೆಗೂ ರೈಲು ಯಾತ್ರ ಮೂಲಕ ಜನರಿಗೆ ಅರಿವು ಮೂಡಿಸುವ ಹಾಗೂಅಂತಹ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098/112ಗೆ ಕರೆಮಾಡುವಂತೆ ಜಾಗೃತಿ ಮೂಡಿಸಲಾಯಿತು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ  ಮಂಜುಳಾ ವಿ. ಪಾಟೀಲ, ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದ್ ರಾಜ್ ಇವರು ಸಂದರ್ಭೋಚಿತವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಹಿಳಾ ಕಲ್ಯಾಣಾಧಿಕಾರಿ ಶಿವಶರಣಪ್ಪ, ಸ್ಟೇಷನ್ ವ್ಯವಸ್ಥಾಪಕ ಜಿ. ಜಿ. ಮೋಹನ್, ಕಾರ್ಮಿಕ ಅಧಿಕಾರಿ ಶರಣಪ್ಪ ಹಳಿಮನಿ, ಡಾನ ಬಾಸ್ಕೊ ಸಂಸ್ಥೆ ನಿರ್ದೇಶಕ ಫಾದರ್ ಕುರಿಯೋಕೋಸ್, ರೈಲ್ವೆ ಪೊಲೀಸ್  ಅನುರಾಗ ಗುಪ್ತ ಮತ್ತು ಸುನಿಲ್ ಕುಮಾರ್, ಜಿ. ಆರ್. ಪಿ ಪೊಲೀಸ್ ಸಿಬ್ಬಂದಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೂಸೈಟಿ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News