×
Ad

ಕಲಬುರಗಿ | ರೋಗಿಗಳನ್ನು ದೇವರ ರೂಪದಂತೆ ನೋಡಬೇಕು : ಡಾ.ಕಾಮರೆಡ್ಡಿ

Update: 2025-07-01 22:00 IST

ಕಲಬುರಗಿ: ರೋಗಿಗಳು ನಮನ್ನು ದೇವರ ರೂಪದಲ್ಲಿ‌ ಕಾಣುತ್ತಾರೆ, ನಾವು ಕೂಡ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ದೇವರ ರೂಪದಲ್ಲಿ ನೋಡಬೇಕು ಎಂದು ಕಲಬುರಗಿ ಜಿಲ್ಲೆಯ ಖ್ಯಾತ ವೈದ್ಯರಾದ ಡಾ.ಎಸ್.ಬಿ. ಕಾಮರೆಡ್ಡಿ ಹೇಳಿದರು.

ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿರುವ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿರುವ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ‌ ಉದ್ಘಾಟಿಸಿ ಅವರು ಮಾತನಾಡಿದರು.

ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೇಯ ಮುಖ್ಯಸ್ಥ ಡಾ.ಫಾರುಕ್ ಅಹ್ಮದ ಮಣ್ಣೂರ ಮಾತನಾಡಿದರು.

ಈ ಸಂದರ್ಭದಲ್ಲಿ ಹೆಚ್.ಕೆ.ಇ ಆಡಳಿತ ಮಂಡಳಿಯ ಸದಸ್ಯರಾದ ಡಾ.ಕಿರಣ ದೇಶಮುಖ, ಡಾ.ಅನೀಲ‌ ಮಲ್ಲಾರಿ , ಡಾ.ರಾಜ್ ಅಹಮದ್ ಮುಲ್ಲಾ ,ಡಾ.ಸಾಗರ್ ಕಟಾರೆ ಡಾ.ಶ್ರೀಕಾಂತ್ , ಡಾ.ಸತೀಶ್ , ಡಾ‌.ಯೋಗೇಶ್, ಡಾ.ಸೊಹೇಬ್, ಡಾ.ಮುಜಾಮಿಲ್, ಡಾ.ಸದಾಕತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News