ಕಲಬುರಗಿ | ಚಲನೆ, ಉಸಿರಾಟ, ಧ್ಯಾನದಿಂದ ಮಾತ್ರ ದೈಹಿಕ, ಮಾನಸಿಕ ಆರೋಗ್ಯ ಸಾಧ್ಯ: ಡಾ.ಸಿ.ಸಿ.ಪಾಟೀಲ್
ಕಲಬುರಗಿ : ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಪದವಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ, ಎನ್ಎಸ್ಎಸ್ ಘಟಕಗಳ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಯೋಗಾ ಪಟುಗಳಾದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಅಮೂಲ್ಯಾ ಹಾಗೂ ಪದವಿ ಮಹಾವಿದ್ಯಾಲಯದ ಸ್ವಾತಿ ಪ್ರಭಾಕರ ಅವರು ಸುಮಾರು ಒಂದು ಗಂಟೆಗಳ ಕಾಲ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯವರನ್ನೊಳಗೊಂಡತೆ ಯೋಗಾಸನ, ಪ್ರಾಣಾಯಾಮಗಳನ್ನು ಕಲಿಸಿ ಎಲ್ಲರೂ ಯೋಗದಲ್ಲಿ ತಲ್ಲಿನರಾಗುವಂತೆ ಪ್ರಚೋದಿಸಿ ತಮ್ಮೊಂದಿಗೆ ಎಲ್ಲರನ್ನೂ ಯೋಗಭ್ಯಾಸದಲ್ಲಿ ತೊಡಗಿಸುವ ಮುಖಾಂತರ ಅಂತರರಾಷ್ಟ್ರಿಯ ಯೋಗ ದಿನವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಹೈ.ಕ.ಶಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಸಿ.ಸಿ.ಪಾಟೀಲ ಪಾಲ್ಗೋಂಡು ಅಂತರಾಷ್ಟ್ರೀಯ ಯೋಗಾ ದಿನಾರಣೆಯ ಕುರಿತು ಮಾತನಾಡಿದರು.
ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ, ಪದವಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರು, ಎನ್ಎಸ್ಎಸ್ ಘಟಕಗಳ ಕಾರ್ಯಕ್ರಮಾಧಿಕಾರಿಗಳು ಹಾಗೂ ಎನ್ ಎಸ್ಎಸ್ ಅಧಿಕಾರಿಗಳು, ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಮೋಹನರಾಜ ಪತ್ತಾರ ಅವರು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.