×
Ad

ಕಲಬುರಗಿ | ಜು.14ರಂದು ಮಹಾಬೋಧಿ ಮುಕ್ತಿ ಆಂದೋಲನ ಪೂರ್ವಭಾವಿ ಸಭೆ : ಎ.ಬಿ.ಹೊಸಮನಿ

Update: 2025-07-10 22:43 IST

ಕಲಬುರಗಿ: ಕರ್ನಾಟಕದಲ್ಲಿ ಮಹಾ ಭೋಧಿ ಮುಕ್ತಿ ಆಂದೋಲನ ತೀವ್ರಗೊಳಿಸಲು ಜು.14ರಂದು ಬೆಳಗ್ಗೆ 11ಗಂಟೆಗೆ ನಗರದ ಕನ್ನಡ ಭವನದ ಸುವರ್ಣ ಕನ್ನಡ ಭವನದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಬುದ್ದಿಷ್ಟ ಸೂಸೈಟಿ ಆಫ್ ಇಂಡಿಯಾದ ಎ.ಬಿ ಹೊಸಮನಿ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಆಕಾಶ ಲಾಮಾ ಅವರ ನೇತೃತ್ವದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ, ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೂಡ ಭಾಗವಹಿಸಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಆಂದೋಲನದ ತೀವ್ರತೆಗಾಗಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ಅನೇಕ ಬೌದ್ಧ ಉಪಾಸಕರು, ಭಂತೇಜಿ, ಬಿಕ್ಕುಗಳು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಲಬುರಗಿ ವಿಭಾಗ ಬೌದ್ಧ ಉಪಾಸಕರು ಸಭೆಯಲ್ಲಿ ಬಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದೇವೇಂದ್ರ ಸಿನ್ನೂರ್, ರಾಜಕುಮಾರ್ ನಡಗೇರಿ, ಗೌತಮ ಶೃಂಗೇರಿ, ರಾಹುಲ್ ಹಾಗರಗಿ, ಬಸಣ್ಣ ಸಿಂಗೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News