ಕಲಬುರಗಿ | ನಗರಕ್ಕೆ 24/7 ಗಂಟೆ ಕುಡಿಯುವ ನೀರು ಜಾರಿಗೆ ಅಧಿಕಾರಿಗಳೊಂದಿಗೆ ಪ್ರಿಯಾಂಕ್ ಖರ್ಗೆ ಚರ್ಚೆ
Update: 2025-02-14 23:16 IST
ಕಲಬುರಗಿ : ನಗರಕ್ಕೆ ಕರ್ನಾಟಕ ನಗರ ಮೂಲಭೂತ ಅಭಿವೃದ್ದಿ ಹಾಗೂ ಹಣಕಾಸು ಸಂಸ್ಥೆ ವತಿಯಿಂದ 24/7 ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಜಾರಿ ಕುರಿತಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿದರು.
ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯು 5 ವರ್ಷಗಳ ವಿನ್ಯಾಸ ಮತ್ತು ನಿರ್ಮಾಣ ಹಂತವನ್ನು ಒಳಗೊಂಡಿದೆ. ಜೊತೆಗೆ 7 ವರ್ಷಗಳ ನಿರ್ವಹಣೆಯನ್ನು ಇದು ಒಳಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.
ನಗರದೊಳಗಿನ 32 ವಲಯಗಳನ್ನು ಒಳಗೊಂಡಂತೆ ಕಲಬುರಗಿಯ ಎಲ್ಲಾ ಮನೆಗಳಿಗೆ 24/7 ನೀರು ಸರಬರಾಜು ಮಾಡುವುದು ಯೋಜನೆಯ ಪ್ರಾಥಮಿಕ ಗುರಿಯಾಗಿದೆ. ಈ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ನಾನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.