ಕಲಬುರಗಿ | ಹೊನುಗುಂಟ ಗ್ರಾಮಕ್ಕೆ ಮೂಲ ಸೌಕರ್ಯಗಳಿಗೆ ಒತ್ತಾಯಿಸಿ ಪ್ರತಿಭಟನೆ
ಕಲಬುರಗಿ: ಹೊನುಗುಂಟ ಗ್ರಾಮ ಪಂಚಾಯತ್ ಗೆ ಕುಡಿಯುವ ನೀರು ಹಾಗೂ ಶೌಚಾಲಯ ಮೂಲ ಸೌಲಭ್ಯ ಒದಗಿಸಲು ಒತ್ತಾಯಿಸಿ ಬುಧವಾರ ತಹಶೀಲ್ ಕಚೇರಿ ಎದುರುಗಡೆ ಎಐಡಿವೈಓ ಯುವಜನ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಎಸ್ ಹೆಚ್ ಮಾತನಾಡಿ, ಹೊನಗುಂಟ ಗ್ರಾಮದಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಪಂಚಾಯಿತಿಯಲ್ಲಿ 8 ತಿಂಗಳುಗಳಿಂದ ಪಿಡಿಓ ಇಲ್ಲ ಮತ್ತು ಕಳೆದ ಎರಡು ವಾರಗಳಿಂದ ಕಾರ್ಯದರ್ಶಿ ಇಲ್ಲದೇ ಇರುವುದರಿಂದ ಊರಿನ ಸಮಸ್ಯೆಯನ್ನು ಹೇಳಿಕೊಳ್ಳಲು ಸಾಧ್ಯವಾಗುತಿಲ್ಲ ಎಂದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಸರಿಯಾದ ನೀರಿನ ವ್ಯವಸ್ಥೆ ಮತ್ತು ಬೀದಿ ದೀಪಗಳಿಲ್ಲ , ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ, ರೋಗ ಹರಡುವ ಭಿತ್ತಿಯಲ್ಲಿದ್ದಾರೆ. ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲದೆ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಗ್ರಾಮದಲ್ಲಿ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು.
ಗ್ರೇಡ್ 2 ತಶೀಲ್ದಾರರಾದ ಗುರುರಾಜ್ ಸಂಗವಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನೆ ಪತ್ರವನ್ನು ಸ್ವೀಕರಿಸಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ್ ರಾವೂರ್ ನಾಳೆ ಹುನುಗುಂಟ ಗ್ರಾಮಕ್ಕೆ ಆಗಮಿಸಿ ಎಲ್ಲ ಸಮಸ್ಯೆಗಳು ಆಲಿಸಿ ಬಗೆಹರಿಸಲು ಪ್ರಯತ್ನ ಮಾಡುವುದಾಗಿ ಭರವಸೆಯನ್ನು ನೀಡಿದರು.
ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಗುಂಡಮ್ಮ ಮಡಿವಾಳ, ಕಾರ್ಯದರ್ಶಿಗಳಾದ ರಮೇಶ್ ದೇವಕರ್, ದೇವರಾಜ್ ರಾಜವಾಳ ಮಾತನಾಡಿದರು. ಈ ಹೊರಾಟದಲ್ಲಿ ರಘು ಪವಾರ್ ಸಿದ್ದು ಚೌದರಿ ಗ್ರಾಮದ ಶಿವು ಬುರ್ಲಿ, ಚಂದ್ರಾಮ ಮರಗೋಳ, ದತ್ತು ಪೂಜಾರಿ, ದೀಪಣ್ಣ, ಅಶ್ವಿನಿ, ಮೌನೇಶ್, ರಾಜವಾಳ, ಶಂಕರ್ ಭಜಂತ್ರಿ ಇನ್ನಿತರರು ಭಾಗವಹಿಸಿದ್ದರು.