×
Ad

ಕಲಬುರಗಿ | ಸಿಜೆಐ ಗವಾಯಿ ಮೇಲೆ ಶೂ ಎಸೆದ ವಕೀಲನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಕ್ರಮಕ್ಕೆ ಆಗ್ರಹ

Update: 2025-10-07 21:57 IST

ಕಲಬುರಗಿ : ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ ಕಿಶೋರನ ಮೇಲೆ ದೇಶದ್ರೋಹ ಕೇಸ್ ದಾಖಲಿಸಿ, ಆತನ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿ, ಬೌದ್ಧ ಉಪಾಸಕರ ಸಂಘ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಂಗಳವಾರ ಇಲ್ಲಿನ ಜಗತ್ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಗಳ ಮುಖಂಡರು, ವಾಹನದ ಟೈರ್ ಸುಟ್ಟು ಆರೋಪಿ ವಕೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶೂ ಎಸೆದ ಜಾತಿವಾದಿ ವಕೀಲ ರಾಕೇಶ ಕಿಶೋರನ ಕೃತ್ಯ ಇತನೊಬ್ಬನ ಕೃತ್ಯ ಅಲ್ಲ, ಇದರ ಹಿಂದೆ ಬಿಜೆಪಿ ಆರ್. ಎಸ್.ಎಸ್ ಹಾಗೂ ಹಿಂದೂ ಸನಾತನವಾದಿಗಳು ಎಂದು ಹೇಳಿಕೊಳ್ಳುವರು ಇತನ ಹಿಂದೆ ಇದ್ದಾರೆ ಎನ್ನುವ ಅನುಮಾನ ಇದೆ. ಇದನ್ನ ಸೂಕ್ತ ತನಿಖೆಗೆ ಒಳಪಡಿಸಿ, ಅಡಗಿರುವ ಷಡ್ಯಂತ್ರವನ್ನು ಬಹಿರಂಗಪಡಿಸಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಅರ್ಜುನ್ ಭದ್ರೆ, ಎ.ಬಿ.ಹೊಸಮನಿ, ಮಲ್ಲಪ್ಪ ಎಂ ಹೊಸಮನಿ, ಕಾಂಗ್ರೆಸ್ ಮುಖಂಡ ರಾಜಕುಮಾರ್ ಕಪನೂರ, ದಿನೇಶ್ ದೊಡ್ಮನಿ, ಹಣಮಂತ ಇಟಗಿ, ಬಸಣ್ಣ ಸಿಂಗೆ, ಪ್ರಕಾಶ್ ಮೂಲಭಾರತಿ, ಸಂಜಯ್ ಮಾಕಲ್, ಹನುಮಂತರಾಯ ದೊಡ್ಡಮನಿ, ಸುರೇಶ್ ಹಾದಿಮನಿ, ಹಣಮಂತ ಬೋಧನಕರ್, ಅರ್ಜುನ್ ಗೊಬ್ಬೂರು, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News