ಕಲಬುರಗಿ | ಮಾನವೀಯತೆಯ ಸಮಾಜ ಬಾಂಧವ್ಯ ಅಗತ್ಯ : ನ್ಯಾ.ಸಂತೋಷ್ ಹೆಗಡೆ
ಕಲಬುರಗಿ : ಮಾನವಿಯತೆಯ ಸಮಾಜ ಬಾಂಧವ್ಯ ಅಳವಡಿಸಿಕೊಳ್ಳಬೇಕು ಈ ಮೂಲಕ ಸಮಾಜ ಸುಸ್ಥಿರ ಆರೋಗ್ಯ ಕಾಪಡಲು ಸಾಧ್ಯವೆಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಡಾ.ಸಂತೋಷ್ ಹೆಗಡೆ ಹೇಳಿದರು.
ನಗರದ ರಿಸಟೋ ಸಂಸ್ಥೆಯ ಮತ್ತು ಎಸ್ಪಿಸಿ ಆಸ್ಪತ್ರೆ ಸಹಯೋಗದಲ್ಲಿ ಖಣದಾಳ್ದಲ್ಲಿ ಮಂಗಳವಾರ ಸರಕಾರಿ ಪ್ರೌಢ ಶಾಲೆಯಲ್ಲಿ ʼಸ್ಮಾರ್ಟ್ ಕ್ಲಿನಿಕ್ -ಹೆಲ್ತ್ ಟೆಲಿ ಮೆಡಿಸಿನ್ ಕ್ಲಿನಿಕ್ʼ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಶರಣರ ನಾಡು ಕಾಯಕ ಬೀಡು, ಪ್ರಥಮ ಬಾರಿಗೆ ಕಲ್ಯಾಣ ಕರ್ನಾಟಕದಲ್ಲಿ ಎಸ್ಪಿಸಿ ಆಸ್ಪತ್ರೆ ಮಾದರಿಯ ಪ್ರತ್ಯೇಕ ಆರೋಗ್ಯ ಸಮ್ವಿಟಾ ಕಿಟ್ ತಪಾಸಣೆಯ ಉಪಕರಣದ ಮೂಲಕ ಶಾಲಾ ಕಾಲೇಜು ಮಕ್ಕಳಿಗೂ ಹಾಗೂ ಮನೆ ಮನೆಗೆ ಆರೋಗ್ಯ ಸೇವೆಯ ಮೂಲಕ ಆರೋಗ್ಯ ಅಧುನಿಕ ವೈದ್ಯಕೀಯ ಅರಿವು-ಮಾಹಿತಿ ಮಾರ್ಗದರ್ಶನವನ್ನು ನೀಡುತ್ತಿರುವುದು ದೇವರ ಸೇವೆಯಾಗಿದೆ. ಸುಸ್ಥಿರ ಆರೋಗ್ಯ ಸಮಾಜ ನಿರ್ಮಾಣಕ್ಕೆ ಆದ್ಯತೆ ಇರಲಿ ಎಂದರು.
ವಿಕಾಸ್ ಅಕಾಡೆಮಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಾ.ಬಸವರಾಜ್ ಪಾಟೀಲ್ ಸೇಡಂ ಅವರು ಮಾತನಾಡಿ, ಎಸ್ಪಿಸಿ ಆಸ್ಪತ್ರೆ ಮಾದರಿಯ ಪ್ರತ್ಯೇಕ ಆರೋಗ್ಯ ತಪಾಸಣೆ ಕೇಂದ್ರವು ಕಳೆದ 5-6 ವರ್ಷಗಳಿಂದ ಸಾವಿರಾರೂ ಜನರಿಗೆ ಸೇವೆ ಒದಗಿದಸಲಾಗಿದೆ. ತಜ್ಞ ವೈದ್ಯರ ತಂಡದ ಮೂಲಕ ತ್ವರಿತ ರೋಗ ನಿರ್ಣಯ, ಸಲಹೆ ಸೂಚನೆ, ಆರಂಭಿಕ ರೋಗ ಲಕ್ಷಣಗಳ ರೋಗಿಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.
ಉಚಿತ ವ್ಯದ್ಯಕೀಯ ತಪಾಸಣಾ ಶಿಬಿರದಲ್ಲಿ ಸರ್ಕಾರಿ ಶಾಲೆ 400 ಮಕ್ಕಳು, ಪಾಲಕರು ಹಾಗೂ ಭಾರತೀಯ ಶಿಕ್ಷಣ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳು ಇತರೆ ಶಾಲೆಗಳಿಂದ ಆಗಮಿಸಿದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಿಸಟೋ ಸಂಸ್ಥೆಯ ಅಧುನಿಕ ವೈದ್ಯಕೀಯ ಉಪಕರಣಗಳ ಮೂಲಕ ಮಕ್ಕಳಿಗೆ ಆರೋಗದ ಮಾಹಿತಿ ನೀಡಲಾಯಿತು.
ವರ್ಣಸಿಂಧು ನೃತ್ಯ ಕಲಾಕೇಂದ್ರ ನಿದೇರ್ಶಕ ಅನಂತ್ ಎನ್.ಚಿಂಚನಸೂರ್ ಮತ್ತು ತಂಡದಿಂದ ಭರತ ನಾಟ್ಯ ನಡೆಸಿಕೊಟ್ಟರು. ಖಣದಾಳ್ ಸರ್ಕಾರಿ ಪ್ರೌಢ ಶಾಲೆಯ ಲಂಬಾಣಿ ನೃತ್ಯ ಮಾಡಿದರು.
ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಮಪ್ರಭು ಪಾಟೀಲ್ ಅವರಿಗೆ ಸನ್ಮಾನಿಸಲಾಯಿತು. ಅಂತರಾಷ್ಟ್ರೀಯ ತಬಲಾ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೋಳಿ ಡಾ. ಸಂತೋಷ ಎನ್., ಉಮೇಶ್ ಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪವನಕುಮಾರ್ ವಳಕೇರಿ, ಪ್ರೌಢ ಶಾಲೆಯ ಮುಖ್ಯಪಾಧ್ಯಾಯ ರಮೇಶಕುಮಾರ್ ದೇವಣಿ, ಡಾ. ನವೀನ್ ಬಿ, ಕೆ, ಶ್ರೀನಿವಾಸ್, ಅನಂತ್ ಎನ್. ಚಿಂಚನಸೂರ, ಶಾಲಾ ಶಿಕ್ಷಕ ಸಿಬ್ಬಂದಿ ಹಾಗೂ ಡಾ. ಆರಾಧನ ಅತಿಥಿಗಳಿಗೆ ಸನ್ಮಾನಿಸಲಾಯಿತು. ಮನಿಷ್ ಕಟಕೆ ಅವರು ಸಂಸ್ಥೆಯ ಕುರಿತು ವಿವರಿಸಿದರು. ಅನಿತಾ ಶಾಂತಪ್ಪ ಕುಂಬಾರ್, ಗುಂಡಪ್ಪಾ, ಬಿ.ಎಂ. ರಾವೂರ್, ನಾರಾಯಣ್ ಎಂ. ಜೋಶಿ ಮುಂತಾದವರು ಉಪಸ್ಥಿತರಿದ್ದರು.