×
Ad

ಕಲಬುರಗಿ | ತಲೆಶ್ಮೀಯಾ, ಮೂಳೆ ಮಜ್ಜೆ ಕಸಿಯ ಕುರಿತು ವಿಶೇಷ ಶಿಬಿರ

Update: 2025-02-18 22:10 IST

ಕಲಬುರಗಿ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯ, ಇಂಡಿಯನ್ ಅಕಾಡೆಮಿ ಆಫ್ ಫಿಡಿಯಾಟ್ರಿಕ್ಸ್ ಹಾಗೂ ಎಚ್‍ಸಿಜಿ ಆಸ್ಪತ್ರೆಯ ಹೆಮೆಟೋಲಾಜಿ ವಿಭಾಗದ ಡಾ.ಇಂತಿಜಾರ್ ಮೆಹದಿ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ತಲೆಸ್ಮೀಯಾ ಮತ್ತು ಮೂಳೆ ಮಜ್ಜೆಯ ಕಸಿಯ ಬಗ್ಗೆ ವಿಶೇಷ ಶಿಬಿರ ಜರುಗಿತು.

ಡಾ.ಮೆಹದಿಯವರು ಮಾತನಾಡಿ, ಮೂಳೆ ಮಜ್ಜೆಯ ಕಸಿಯ ರೋಗವು ಅತ್ಯಂತ ವೆಚ್ಚದಾಯಕವಾಗಿದೆ. ಡ್ರಾಟಿ ಸ್ಟೀಮ್ ಸೆಲ್ ಡೋನರ್ ವಲ್ರ್ಡ್ ವೈಡ್ ಆರ್ಗನೈಜೇಷನ್ ಪ್ರತಿನಿಧಿಯಾದ ಕೌಶಲ್ಯ ಅವರು 31 ಬಗೆಯ ಹ್ಯೂಮನ್ ಲುಕ್ಯೂಸೈಟ್ ಎಂಟಿಜನ್ ಮಾದರಿಗಳನ್ನು ಪ್ರದರ್ಶಿಸಿದರು.

ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ರೂಪಾ ಮಂಗಶೆಟ್ಟಿ ಮಾತನಾಡಿ, ನಮ್ಮ ಭಾಗದಲ್ಲಿ ತಲೆಸ್ಮೀಯಾ ಕಾಯಿಲೆ ಹಾಗೂ ಮೂಳೆ ಮಜ್ಜೆಯ ಕಸಿಯ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ.ಅಪೂರ್ವ ಎ.ಬಿ., ಡಾ. ಶರಣ್ ಕೆ, ಡಾ.ಐಶ್ವರ್ಯ ಬಿಜಾಪುರ, ಡಾ.ರೋಹಿಣಿ ದೇಸಾಯಿ ಅವರು ಶಿಬಿರದಲ್ಲಿ ಭಾಗವಹಿಸಿದ್ದರು. ಮಹಾವಿದ್ಯಾಲಯದ ಡೀನ್ ಡಾ.ಶರಣಗೌಡ ಪಾಟೀಲ್, ವೈಸ್ ಡೀನ್ ಡಾ.ಕಪ್ಪೀಕೆರಿ, ವೈದ್ಯಾಧಿಕಾರಿ ಡಾ.ಆನಂದ್ ಗಾರಂಪಳ್ಳಿ ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News