×
Ad

ಕಲಬುರಗಿ | ದ.ರಾ.ಬೇಂದ್ರೆ ಅವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

Update: 2025-01-31 22:58 IST

ಕಲಬುರಗಿ : ಕನ್ನಡ ಸಾರಸತ್ವ ಲೋಕದಲ್ಲಿ ಧ್ರುವ ನಕ್ಷತ್ರದಂತೆ ಬೆಳಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ವರಕವಿ ದ.ರಾ.ಬೇಂದ್ರೆ ಅವರಿಗೆ ಸಲ್ಲುತ್ತದೆ ಎಂದು ಶಿಕ್ಷಕಿ ಭುವನೇಶ್ವರಿ ಎಂ. ಅವರು ಹೇಳಿದರು.

ಅವರು ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ʼದ.ರಾ.ಬೇಂದ್ರೆ ಅವರ ಕುರಿತ ವಿಶೇಷ ಉಪನ್ಯಾಸʼ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಬಾಳಿ, ನರಬಲಿ ಎನ್ನುವ ಕವನದ ಮೂಲಕ ಆಗಿನ ಬ್ರಿಟಿಷ್ ಸರಕಾರವನ್ನೇ ಪ್ರಶ್ನಿಸಿ ಜೈಲು ಸೇರಿದ ಬೇಂದ್ರೆ ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋದರು. ಇವರನ್ನು ಕನ್ನಡದ ಟ್ಯಾಗೋರ್ ಎಂದು ಕರೆಯಲಾಗುತ್ತಿದೆ, ಬೇಂದ್ರೆ ಅವರು ಇವತ್ತಿನ ಪೀಳಿಗೆಯ ಅಸಂಖ್ಯಾತ ಕವಿ, ಸಾಹಿತಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ವೇದಿಕೆಯ ಮೇಲೆ ಶಾಲೆಯ ಮುಖ್ಯಗುರು ವಿದ್ಯಾಧರ ಖಂಡಾಳ, ಶಿಕ್ಷಕರಾದ ಶಿವಕುಮಾರ್ ಸರಡಗಿ, ಶ್ಯಾಮಸುಂದರ ದೊಡ್ಡಮನಿ, ಶೀಲಾ ಪೂಜಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮಹಾಲಕ್ಷ್ಮಿ ನಿರೂಪಿಸಿದರೆ, ಮೇಘನಾ ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News